

Mysuru: ಪತ್ನಿಯನ್ನು ಹತ್ಯೆ ಮಾಡಿದ್ದ ಎಂಬ ಆರೋಪದಲ್ಲಿ ಸುಮಾರು ಎರಡು ವರ್ಷ ಕಾಲ ಜೈಲು ಶಿಕ್ಷೆಯನ್ನು ಅನುಭವಿಸಿದ ಬುಡಕಟ್ಟು ವ್ಯಕ್ತಿಯೋರ್ವ, ತನ್ನ ಪತ್ನಿ ಬದುಕಿರುವುದನ್ನು ಪತ್ತೆ ಹಚ್ಚಿ ತನ್ನನ್ನೂ ಅಕ್ರಮವಾಗಿ ಜೈಲು ಶಿಕ್ಷೆ ಅನುಭವಿಸುವ ಹಾಗೆ ಮಾಡಿದ್ದಕ್ಕಾಗಿ ಪೊಲೀಸ್ ಅಧಿಕಾರಿಗಳ ವಿರುದ್ಧ 5 ಕೋಟಿ ರೂಪಾಯಿ ಪರಿಹಾರ ಮತ್ತು ಕ್ರಿಮಿನಲ್ ಕ್ರಮಕ್ಕಾಗಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಇನ್ನು ಕುಶಾಲನಗರ ತಾಲೂಕಿನ ಬಸವನಹಳ್ಳಿ ನಿವಾಸಿ ಕುರುಬರ ಸುರೇಶ್ ಅವರನ್ನು ಮೈಸೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 2025 ಏಪ್ರಿಲ್ ನಲ್ಲಿ ಖುಲಾಸೆಗೊಳಿಸಿತ್ತು ಹಾಗೂ ಅವರಿಗೆ ಒಂದು ಲಕ್ಷ ರೂ ಪರಿಹಾರ ಕೊಡುವಂತೆ ಕರ್ನಾಟಕ ಗೃಹ ಇಲಾಖೆಗೆ ಕೋರ್ಟ್ ಆದೇಶ ನೀಡಿತ್ತು. ಅದಾಗಿಯೂ ಅಸಮಾಧಾನ ಗೊಂಡ ಸುರೇಶ್ ಇದೀಗ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.
ಇದು 2021 ರ ಹಿಂದಿನ ಪ್ರಕರಣ. ಪತ್ನಿ ಮಲ್ಲಿಗೆ ನಾಪತ್ತೆಯಾದ ನಂತರ ಕಾಣೆಯಾದ ನಂತರ ಸುರೇಶ್ ಪ್ರಕರಣ ದಾಖಲಿಸಿದ್ದರು. 2022 ರಲ್ಲಿ, ನೆರೆಯ ಮೈಸೂರು ಜಿಲ್ಲೆಯ ಬೆಟ್ಟದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿತ್ತು. ಅಸ್ಪಷ್ಪ ಗುರುತಿನ ಕಾರಣ ಪೊಲೀಸರು ಮಲ್ಲಿಗೆ ಎಂದೇ ಶಂಕಿಸಿದ್ದರು. DNA ಹೊಂದಾಣಿಕೆ ಇಲ್ಲದಿದ್ದರೂ ಸುರೇಶ್‌ನನ್ನು ಬಂಧಿಸಿ ಮಲ್ಲಿಗೆ ಕೊಲೆ ಆರೋಪ ಹೊರಿಸಲಾಗಿತ್ತು. ಡಿಎನ್‌ಎ ಪರೀಕ್ಷೆ ಮಲ್ಲಿಗೆಯ ಅವಶೇಷಗಳಲ್ಲ ಎಂದು ನ್ಯಾಯಾಲಯ ದೃಢಪಡಿಸುವವರೆಗೂ ಅವರು ಸುಮಾರು 18 ತಿಂಗಳ ಕಾಲ ಬಂಧನದಲ್ಲಿದ್ದರು. ನಂತರ ಸುರೇಶ್‌ಗೆ ಜಾಮೀನು ನೀಡಿ ಬಿಡುಗಡೆ ಮಾಡಲಾಯಿತು.
ಇದನ್ನೂ ಓದಿ;RRB: ರೈಲ್ವೆ ನೇಮಕಾತಿ ಮಂಡಳಿಯಲ್ಲಿ ತಂತ್ರಜ್ಞ ಗ್ರೇಡ್ I ಮತ್ತು III ಹುದ್ದೆಗಳಿಗೆ ಅರ್ಜಿ ಆಹ್ವಾನ













