RRB: ರೈಲ್ವೆ ನೇಮಕಾತಿ ಮಂಡಳಿಯಲ್ಲಿ ತಂತ್ರಜ್ಞ ಗ್ರೇಡ್ I ಮತ್ತು III ಹುದ್ದೆಗಳಿಗೆ ಅರ್ಜಿ ಆಹ್ವಾನ

RRB: ರೈಲ್ವೆ ನೇಮಕಾತಿ ಮಂಡಳಿ (RRB) ತಂತ್ರಜ್ಞ ಗ್ರೇಡ್ I ಮತ್ತು III ಹುದ್ದೆಗಳ ನೇಮಕಾತಿಗಾಗಿ ಕಿರು ಅಧಿಸೂಚನೆಯನ್ನು ಹೊರಡಿಸಿದೆ. ವಿವರವಾದ ಜಾಹೀರಾತು ಕೂಡ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಒಟ್ಟು 6180 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗುತ್ತದೆ. ಮತ್ತು ಇದು ಜೂನ್ 28 ರಿಂದ ಪ್ರಾರಂಭವಾಗಲಿದ್ದು ಜುಲೈ 28 ರ ತನಕ ಇರುತ್ತದೆ. ಆಸಕ್ತ ಅಭ್ಯರ್ಥಿಗಳು RRB ನ ಅಧಿಕೃತ ವೆಬ್ಸೈಟ್ಗೆ rrbcdg.gov.in ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಸದ್ಯ ಬಿಡುಗಡೆಯಾದ ಅಧಿಸೂಚನೆಯ ಪ್ರಕಾರ, 6000 ಹುದ್ದೆಗಳು ಟೆಕ್ನಿಷಿಯನ್ ಗ್ರೇಡ್ III ಗೆ ಮತ್ತು 180 ಹುದ್ದೆಗಳು ಗ್ರೇಡ್ I ಗೆ ಇವೆ. ಟೆಕ್ನಿಷಿಯನ್ ಗ್ರೇಡ್-1 ಸಿಗ್ನಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಇ/ಬಿ.ಟೆಕ್, ಎಂಜಿನಿಯರಿಂಗ್ ಡಿಪ್ಲೊಮಾ ಅಥವಾ ಎಂಜಿನಿಯರಿಂಗ್ನಲ್ಲಿ ಬಿಎಸ್ಸಿ ಪದವಿ ಹೊಂದಿರಬೇಕು. ಟೆಕ್ನಿಷಿಯನ್ ಗ್ರೇಡ್-3 ಹುದ್ದೆಗಳಿಗೆ, ಅರ್ಜಿದಾರರು 10 ನೇ ತರಗತಿ ಉತ್ತೀರ್ಣರಾಗಿರಬೇಕು ಮತ್ತು ಸಂಬಂಧಿತ ಟ್ರೇಡ್ನಲ್ಲಿ ಐಟಿಐ ಅರ್ಹತೆಯನ್ನು ಹೊಂದಿರಬೇಕು.
ಅರ್ಜಿ ಸಲ್ಲಿಸುವುದು ಹೇಗೆ?
RRB ನ ಅಧಿಕೃತ ವೆಬ್ಸೈಟ್ಗೆ rrbcdg.gov.in ಭೇಟಿ ನೀಡಿ.
ಮುಖಪುಟದಲ್ಲಿ ನೀಡಲಾದ RRB ತಂತ್ರಜ್ಞರ ನೇಮಕಾತಿ 2025 ಲಿಂಕ್ ಅನ್ನು ಕ್ಲಿಕ್ ಮಾಡಿ.
ಈಗಲೇ ನೋಂದಾಯಿಸಿ ಮತ್ತು ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ, ಶುಲ್ಕವನ್ನು ಪಾವತಿಸಿ ಮತ್ತು ಸಲ್ಲಿಸಿ.
ಇದನ್ನೂ ಓದಿ:Kolara: ಚಿನ್ನವೆಂದು ನಕಲಿ ಸರವನ್ನು ಕದ್ದ ಕಳ್ಳರು: ಮಹಿಳೆಯನ್ನು ಅಟ್ಟಾಡಿಸಿಕೊಂಡು ಹೋಗಿ ಕಳ್ಳತನ
Comments are closed.