Bike Taxi: ಬೈಕ್ ಟ್ಯಾಕ್ಸಿ ನಿಷೇಧ: ನಿಷೇಧ ರದ್ದು ಪಡಿಸುವಂತೆ ಕೋರಿ ಸಾರಿಗೆ ಸಚಿವರಿಗೆ ಮನವಿ

Share the Article

Bike Taxi: ಈಗಾಗಲೇ ರಾಜ್ಯದಲ್ಲಿ ಜೂನ್ 16 ರಿಂದ ಬೈಕ್ ಟ್ಯಾಕ್ಸಿಗಳ ಮೇಲೆ ನಿಷೇಧ ಹೇರಿದ್ದು, ಇದೀಗ ನಿಷೇಧವನ್ನು ರದ್ದುಗೊಳಿಸುವಂತೆ ಬೈಕ್ ಟ್ಯಾಕ್ಸಿ ಸಂಘಟನೆಯವರು ಕರ್ನಾಟಕ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.

ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರಿಗೆ ಪತ್ರ ಮನವಿ ಮಾಡಿದ್ದು, ಸಾವಿರಾರು ಉದ್ಯೋಗಿಗಳಿಗೆ ಸಂಕಷ್ಟ ಎದುರಾಗಿದೆ ಎಂದು ಈ ಮೂಲಕ ತಿಳಿಸಿದ್ದಾರೆ. ಹಲವಾರು ಉದ್ಯೋಗಿಗಳು ಈ ಮೂಲಕ 30 ರಿಂದ 35 ಸಾವಿರದ ತನಕ ಗಳಿಸಿ ಅವರ ಕುಟುಂಬಕ್ಕೆ ನೆರವಾಗಿದ್ದರು. ಹಾಗೂ ಮಳೆಗಾಳಿ ಚಳಿ ಎನ್ನದೆ ಎಲ್ಲರನ್ನೂ ಅವರವರ ಜಾಗಕ್ಕೆ ತಲುಪಿಸುತ್ತಿದ್ದರು.

ಈ ರೀತಿಯಾಗಿ ಬೈಕ್ ಟ್ಯಾಕ್ಸಿಗಳಲ್ಲಿ ಉದ್ಯೋಗ ಹೊಂದಿರುವ ಅನೇಕರು ಪದವೀಧರರಾಗಿದ್ದು, ಇದೀಗ ಅವರಿಗೆ ಕೆಲಸ ಇಲ್ಲದ ಕಾರಣ ಅವರ ಕುಟುಂಬಗಳಿಗೆ ಬಡತನದ ಸಿಡಿಲು ಬಡಿದಂತಾಗಿದೆ ಎಂದು ಮನವಿಯಲ್ಲಿ ಹೇಳಿದ್ದು, ಈ ನಿಷೇಧವನ್ನು ಹಿಂಪಡೆಯುವಂತೆ ಕೇಳಿಕೊಂಡಿದ್ದಾರೆ.

ಇದನ್ನೂ ಓದಿ;BSNL Sim: ಸ್ವಯಂ-ಕೆವೈಸಿಯೊಂದಿಗೆ ಸಿಮ್ ಕಾರ್ಡ್ ಡೋರ್ ಡೆಲಿವರಿ – ಬಿಎಸ್‌ಎನ್‌ಎಲ್‌ನಿಂದ ಹೊಸ ಸೌಲಭ್ಯ ಪ್ರಾರಂಭ

Comments are closed.