Kasaragod: ಹೋಂ ಸ್ಟೇಗೆ ಬಂದ ಯುವತಿಯ ಮಾನಭಂಗಕ್ಕೆ ಯತ್ನ

Kasaragod: ಹೋಂ ಸ್ಟೇಯಲ್ಲಿ ಯುವತಿಯೊಬ್ಬಳ ಮಾನಭಂಗಕ್ಕೆ ಯತ್ನ ಮಾಡಿದ ಘಟನೆ ನಡೆದಿದೆ. ಉದುಮ ಕಾಪಿಲ್‌ನ ಹೋಂ ಸ್ಟೇಯಲ್ಲಿ ಯುವತಿಯನ್ನು ಬೆದರಿಸಿ ಆಕೆಯ ಮೇಲೆ ಮಾನಭಂಗಕ್ಕೆ ಯತ್ನ ಮಾಡಿದ ಆರೋಪದಲ್ಲಿ ಬೇಕಲ ಪೊಲೀಸರು ಕೊಲೆ ಆರೋಪಿ ಸಹಿತ ಇಬ್ಬರ ಬಂಧನ ಮಾಡಿದ್ದಾರೆ.

ಬಾರ ಎರೋಲ್ ಕುನ್ನುಮ್ಮಲ್ ಮೊಹಮ್ಮದ್ ಇರ್ಷಾದ್ (28), ಎರೋಲ್ ಹೌಸ್‌ನ ಎನ್.ಎಸ್.ಅಬ್ದುಲ್ಲ (29) ಬಂಧಿತ ಆರೋಪಿಗಳು.
ಸೋಮವಾರ ರಾತ್ರಿ ಉದ್ಯೋಗ ನಿಮಿತ್ತ ದಕ್ಷಿಣದ ಜಿಲ್ಲೆಯಿಂದ ಯುವತಿ ಬಂದಿದ್ದು, ಮಾನಭಂಗಕ್ಕೆ ಯತ್ನ ಮಾಡಿರುವುದಾಗಿ ದೂರಿನಲ್ಲಿ ಹೇಳಿದ್ದಾರೆ. ಮಧ್ಯರಾತ್ರಿ ಫೋನ್‌ನಲ್ಲಿ ಕರೆ ಮಾಡಿ ಬೆದರಿಕೆಯೊಡ್ಡಿರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ. ಕೊಠಡಿಯ ಬಾಗಿಲನ್ನು ತಟ್ಟಿ ಅಶ್ಲೀಲ ಮಾತುಗಳನ್ನಾಡಿದ್ದಾರೆಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.
ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಎರಡು ವಾರಗಳ ನ್ಯಾಯಾಂಗ ಬಂಧನ ವಿಧಿಸಿದೆ. 2015 ಮೇ 12 ರಂದು ರಾತ್ರಿ ಉದುಮ ಕಣ್ಣಂಗುಳಂನಲ್ಲಿ ಶಾಹುಲ್ ಹಮೀದ್‌ನನ್ನು ಕೊಲೆ ಮಾಡಿ, ಸಹೋದರ ಬಾದುಷಾ ಅವರಿಗೆ ಇರಿದು ಗಾಯಮಾಡಿದ ಪ್ರಕರಣದಲ್ಲಿ ಮೊಹಮ್ಮದ್ ಇರ್ಷಾದ್ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
Comments are closed.