Kodagu Rain- ಕೊಡಗಿನಲ್ಲಿ ಭಾರಿ ಮಳೆ – ನಾಳೆ ಶಾಲಾ ಕಾಲೇಜುಗಳಿಗೆ ರಜೆ – ಎನ್. ಡಿ. ಆರ್ ಎಫ್ ತಂಡ ಭೇಟಿ, ಪರಿಶೀಲನೆ

Kodagu Rain- ಕೊಡಗು ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆ ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿಗೆ ನಾಳೆ ( ಜೂನ್ 26) ರಂದು ರಜೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.

ಶ್ರೀ ಕಿರಣ್ ಕುಮಾರ್ ಸಹಾಯಕ ಕಮಾಂಡೆಂಟ್, 10 NDRF, ಕೊಡಗು ಜಿಲ್ಲೆಗೆ ಭೇಟಿ ನೀಡಿದರು. ಜಿಲ್ಲೆಯಲ್ಲಿ ಈಗಾಗಲೇ ನಿಯೋಜನೆಗೊಂಡಿರುವ NDRF ತಂಡದ ಸನ್ನದ್ಧತೆಯನ್ನು ಪರಿಶೀಲಿಸಿದರು. ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರಾದ ಶ್ರೀ. ಆರ್. ಎಂ. ಅನನ್ಯ ವಾಸುದೇವ ಅವರೊಡನೆ ಸಮಾಲೋಚನೆ ನಡೆಸಿ ಭೂಕುಸಿತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು.
ಇದನ್ನೂ ಓದಿ:Indo-Pak: ಭಾರತದ ಬಜೆಟ್ ಮುಂದೆ ನಮ್ಮದು ಏನೂ ಅಲ್ಲ: ಸಂಸತ್ತಿನಲ್ಲಿ ಭಾರತವನ್ನು ಹೊಗಳಿದ ಪಾಕ್ ಸಂಸದ
Comments are closed.