A Young Man Married Widow: ಅಂತಾರಾಷ್ಟ್ರೀಯ ವಿಧವೆಯರ ದಿನದಂದೇ ವಿಧವೆಗೆ ಬಾಳು ಕೊಟ್ಟ ಯುವಕ

Jharkhand: ಜೂನ್ 23 ರ ಅಂತಾರಾಷ್ಟ್ರೀಯ ವಿಧವೆಯರ ದಿನದಂದು ಪಲಮುದಲ್ಲಿ ಪಹಲ್ ಟ್ರಸ್ಟ್ ಆಯೋಜಿಸಿದ್ದ ವಿವಾಹ ಸಮಾರಂಭದಲ್ಲಿ ಪೋಲ್ಬೋಲ್ ನಿವಾಸಿ ಯುವಕನೋರ್ವ ಒಂದು ಮಗುವಿನ ತಾಯಿಯಾಗಿರುವ ವಿಧವೆಯನ್ನು ವಿವಾಹವಾಗುವ ಮೂಲಕ ಸಮಾಜಕ್ಕೆ ಮಾದರಿಯಾಗಿರುವ ಘಟನೆ ನಡೆದಿದೆ.

ಪೋಲ್ಬೋಲ್ ನಿವಾಸಿ ಪವನ್‌ಕುಮಾರ್ ಅವರು ವಿಧವೆ ಪೂಜಾ ದೇವಿಯವರನ್ನು ಮದುವೆಯಾಗಿರುವ ಘಟನೆ ನಡೆದಿದೆ.
2018 ರಲ್ಲಿ ಪೂಜಾದೇವಿ ಎಂಬಾಕೆ ವ್ಯಕ್ತಿಯೊಬ್ಬನ ಜೊತೆ ಮದುವೆಯಾಗಿತ್ತು. 2019 ರಲ್ಲಿ ಮಗು ಆಗಿದೆ. ಪೂಜಾ ಪತಿ 2020 ರಲ್ಲಿ ನಿಧನರಾದರು. ಪೂಜಾ ಅವರನ್ನು ಮದುವೆಯಾಗಿರುವ ಪವನ್ ಬಿಎ ಪದವೀಧರ, ಮೈಕ್ರೋಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಸರಕಾರ ವಿಧವಾ ಪುನರ್ವಿವಾಹಕ್ಕೆ 2 ಲಕ್ಷ ರೂ. ಪ್ರೋತ್ಸಾಹ ಧನ ನೀಡುತ್ತದೆ. 2025 ರಲ್ಲಿ ಪಲಮುನಲ್ಲಿ ಐದು ವಿಧವಾ ಪುನರ್ವಿವಾಹ ಮಾಡಿಸುವ ಗುರಿಯನ್ನು ಸರಕಾರ ಹೊಂದಿದೆ ಎಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನೀತಾ ಚೌಹಾಣ್ ಹೇಳಿದ್ದಾರೆ.
Comments are closed.