Karawara: ವಾಹನದ ಮೇಲೆ ಮುರಿದು ಬಿದ್ದ ವಿದ್ಯುತ್‌ ಕಂಬ; ಕಾರ್ಮಿಕರು ಪವಾಡಸದೃಶ ಪಾರು

Share the Article

Karawara: ಮುಂಡಗೋಡ ತಾಲೂಕಿನ ಬೆಡಸಗಾಂವ್‌ ಗ್ರಾಮದಲ್ಲಿ ದೊಡ್ಡ ಅನಾಹುತವೊಂದು ತಪ್ಪಿದೆ. ವಾಹನದಲ್ಲಿ 10 ಕಾರ್ಮಿಕರು ಇದ್ದು, ಇವರನ್ನು ಕೆಲಸಕ್ಕೆಂದು ಕರೆದೊಯ್ಯಲಾಗುತ್ತಿದ್ದು, ವಾಹನದ ಮೇಲೆ ವಿದ್ಯುತ್‌ ಕಂಬ ಮುರಿದು ಬಿದ್ದಿದೆ. ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ರಾಮಾಪುರದಿಂದ ಹುಲೆಕಲ್‌ಗೆ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರಿಗೆ ವಾಹನದ ಮೇಲೆ ಮರ ಮುರಿದು ವಿದ್ಯುತ್‌ ತಂತಿಗಳ ಮೇಲೆ ಬಿದ್ದಿದೆ. ವಿದ್ಯುತ್‌ ಕಂಬ ಮುರಿದು ವಾಹನದ ಮೇಲೆ ಬಿದ್ದಿದೆ. ಬೆಡಸಗಾಂವ್‌ ಗ್ರಾಮದ ವಿಜಯ ಶಾಂತು ನಾಯ್ಕ ಅವರು ಇದಕ್ಕೂ ಮುನ್ನ ಮರ ಮುರಿದು ಬೀಳುವ ಅಂದಾಜಿನಿಂದ ವಿದ್ಯುತ್‌ ಸಂಪರ್ಕವನ್ನು ಕಡಿತ ಮಾಡಿದ್ದರಿಂದ ವಿದ್ಯುತ್‌ ಕಂಬ ವಾಹನದ ಮೇಲೆ ಬಿದ್ದರೂ ವಿದ್ಯುತ್‌ ಪ್ರವಹಿಸದ ಕಾರಣ, ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ:Infertility: ಯುವಕರಲ್ಲಿ ಬಂಜೆತನದ ಸಮಸ್ಯೆ ವೇಗವಾಗಿ ಹೆಚ್ಚುತ್ತಿರುವುದೇಕೆ? ಇದಕ್ಕೆ ಕಾರಣ ಏನು?

 

Comments are closed.