Kapu: ಕಾಪುವಿನಲ್ಲಿ ಶಾಲಾ ವಾಹನ ಚಾಲಕ ಸಾವು! ಆತ್ಮಹತ್ಯೆ ಶಂಕೆ!

Kapu: ಕಾಪುವಿನ (Kapu) ಮಣಿಪುರದಲ್ಲಿ ಶಾಲಾ ವಾಹನ ಚಾಲಕರೊಬ್ಬರು ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮಣಿಪುರ ದೆಂದೂರುಕಟ್ಟೆ ನಿವಾಸಿ, ಪಲಿಮಾರು ಮಠದ ಗುರುಕುಲ ಶಾಲೆಯ ವಾಹನದ ಚಾಲಕನಾಗಿ ಕೆಲಸ ಮಾಡಿ ಕೊಂಡಿದ್ದ ರವಿಪ್ರಕಾಶ್ ಐತಾಳ್ (57) ಮೃತ ದುರ್ದೈವಿ.

ಕಳೆದ 15 ದಿನಗಳಿಂದ ಯಾವುದೇ ಕೆಲಸ ಇಲ್ಲದ ಕಾರಣ ಅವರು ಮನೆಯಲ್ಲಿಯೇ ಇದ್ದು, ಮಾನಸಿಕವಾಗಿ ಕುಗ್ಗಿದ್ದರು ಎನ್ನಲಾಗುತ್ತಿದೆ. ಸೋಮವಾರ ಸಂಜೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ರವಿ ಪ್ರಕಾಶ್ ಅವರು ಮನೆಯಲ್ಲಿನ ಬಟ್ಟೆ ಒಣಹಾಕುವ ಜಾಗದಲ್ಲಿ ಬಿದ್ದಿರುವುದನ್ನು ನೋಡಿದ ಪತ್ನಿ ಅವರನ್ನು ಎಬ್ಬಿಸಲು ಹೋದಾಗ ಮಾತನಾಡುತ್ತಿರಲಿಲ್ಲ. ಕೂಡಲೇ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಮೃತರ ಪುತ್ರ ಕಿರಣ್ ಕುಮಾರ್ ನೀಡಿರುವ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.
Comments are closed.