Kabini: ಕಬಿನಿ ಜಲಾಶಯದಲ್ಲಿ ಬಿರುಕು!

Kabini: ರಾಜ್ಯಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಕಾರಣ ಎಲ್ಲಾ ನದಿಗಳು ತುಂಬಿ ತುಳುಕುತ್ತಿದೆ. ಹಾಗೆಯೇ ಕರ್ನಾಟಕ ಹಾಗೂ ತಮಿಳುನಾಡಿನ ಜೀವನಾಡಿ ಆಗಿರುವ ಕಬಿನಿ ಜಲಾಶಯವು ತುಂಬಿದ್ದು, ಅದರ ಕಲ್ಲಿನ ರಚನೆಯಲ್ಲಿ ಸಣ್ಣ ಬಿರುಕುಗಳು ಮತ್ತು ಕುಳಿಗಳು ಕಂಡು ಬರುತ್ತಿವೆ.

ಜಲಾಶಯಕ್ಕೆ ತಕ್ಷಣ ಯಾವುದೇ ಅಪಾಯ ಇಲ್ಲ ಎಂದು ತಜ್ಞರು ಹೇಳಿದ್ದಾರೆ. ಆದರೆ ಉಂಟಾಗಿರುವ ಕುಳಿಗಳು ಮತ್ತು ಬಿರುಕುಗಳನ್ನು ಸರಿ ಪಡಿಸುವಲ್ಲಿ ಯಾವುದೇ ನಿರ್ಲಕ್ಷ್ಯ ಅಥವಾ ವಿಳಂಬ ಮಾಡಬಾರದು ಎಂದು ತಿಳಿಸಿದ್ದಾರೆ. ನೀರಾವರಿ ಅಧಿಕಾರಿಗಳಿಗೆ ಸಮಸ್ಯೆಯ ಬಗ್ಗೆ ತಿಳಿದ ನಂತರ ರೋಬೋಟ್‌ಗಳು ಮತ್ತು ನೀರೊಳಗೆ ಕ್ಯಾಮೆರಾಗಳನ್ನು ಸಹ ನಿಯೋಜಿಸಿದ್ದರು.
ಬಿರುಕುಗಳು ಮತ್ತು ಕುಳಿಗಳು 40 ರಿಂದ 50 ಸೆಂ.ಮೀ.ಗಳಷ್ಟಿದ್ದು, ಅವುಗಳನ್ನು ಸರಿಪಡಿಸದಿದ್ದರೇ ಮತ್ತಷ್ಟು ಹೆಚ್ಚಾಗುತ್ತವೆ ಎಂದು ತಜ್ಞರು ಹೇಳಿದರು. ಸಂಶೋಧನೆಗಳು ಮತ್ತು ಕಾವೇರಿ ನಿರಾವರಿ ನಿಗಮ ಲಿಮಿಟೆಡ್ ಅಧಿಕಾರಿಗಳ ವರದಿಯ ಆಧಾರದ ಮೇಲೆ, ಏಪ್ರಿಲ್ 24 ರಂದು ಮಲೆ ಮಹದೇಶ್ವರ ಬೆಟ್ಟಗಳಲ್ಲಿ ನಡೆದ ವಿಶೇಷ ಸಭೆಯಲ್ಲಿ ರಾಜ್ಯ ಸಚಿವ ಸಂಪುಟವು ಅಣೆಕಟ್ಟು ದುರಸ್ತಿ ಕಾರ್ಯಕ್ಕಾಗಿ 32.35 ಕೋಟಿ ರೂ.ಗಳಿಗೆ ಅನುಮೋದನೆ ನೀಡಿದೆ.
Comments are closed.