Dyamesh: ‘ಅವರು ಹೇಳೋದೆಲ್ಲ ಸುಳ್ಳು…’ ಸರಿಗಮಪ ಶೋ ನಲ್ಲಿ ಹೇಗೆಲ್ಲಾ ನಡೆಸಿಕೊಂಡರು ಎಂದು ಎಳೆಎಳೆಯಾಗಿ ಬಿಚ್ಚಿಟ್ಟ ದ್ಯಾಮೇಶ್!!

Share the Article

Dyamesh: ಈ ಬಾರಿಯ ಕನ್ನಡದ ಸರಿಗಮಪ ಶೋ ಸಾಕಷ್ಟು ವಿವಾದಗಳಿಂದಲೇ ಸುದ್ದಿಯಾಗಿತ್ತು. ಸಿಂಪತಿ ಗಿಟ್ಟಿಸಿಕೊಂಡ ಅಭ್ಯರ್ಥಿಗಳನ್ನು ಗೆಲ್ಲಿಸಿದರು, ಟಿ ಆರ್ ಪಿ ಹಿಂದೆ ಬಿದ್ದರು, ನಿಜವಾದ ಪ್ರತಿಭೆಗಳಿಗೆ ಅವಕಾಶ ಸಿಗಲಿಲ್ಲ ಎಂಬೆಲ್ಲ ಆರೋಪಗಳು ಈ ಸರಿಯ ಶೋ ಮೇಲೆ ಕೇಳಿ ಬಂದಿದ್ದವು. ಇದೀಗ ಸರಿಗಮಪ ಶೋ ಸ್ಪರ್ಧಿಯಾಗಿದ್ದ ದ್ಯಾಮೇಶ್ ಅವರು ಶೋನಲ್ಲಿ ತಮಗಾದ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ.

ಈ ಸಲದ ಶೋನಲ್ಲಿ ಸುಂದರವಾಗಿ ಹಾಡಿ ಗಮನ ಸೆಳೆದವರಲ್ಲಿ ಒಬ್ಬರು ದ್ಯಾಮೇಶ್. ದ್ಯಾಮೇಶ ಯಾವುದೇ ಸಂಗೀತ ಶಾಲೆಯಲ್ಲಿ ಅಭ್ಯಾಸ ಮಾಡಿಲ್ಲ. ಆದರೆ ಅವರ ತಮ್ಮ ಕಂಠಸಿರಿಯಿಂದ ಎಲ್ಲರನ್ನೂ ಮರುಳು ಮಾಡಿದ್ದರು. ಅಪ್ಪ-ಅಮ್ಮನಿಲ್ಲದ ದ್ಯಾಮೇಶ ಹೂವು ಕಟ್ಟಿ, ಮಾರಾಟ ಮಾಡಿ, ಬದುಕು ಸಾಗಿಸುತ್ತಾರೆ. ಅವರ ಸಂಗೀತದ ಆಸಕ್ತಿ ಅವರನ್ನು ಸರಿಗಮಪ ವೇದಿಕೆಯವರೆಗೆ ಕರೆ ತಂದಿತ್ತು. ಇದೀಗ ದ್ಯಾಮೇಶ್ ಅವರು ಜೀ ಕನ್ನಡದ ರಿಯಾಲಿಟಿ ಷೋ ಸರಿಗಮಪದ ಕುರಿತು ಅವನಿಯಾನ್ ನ್ಯೂಸ್ ಜೊತೆ ಮಾತನಾಡಿದ್ದಾರೆ.

ದ್ಯಾಮೇಶ್ ಹೇಳಿದ್ದೇನು?

“ನಮಗೆ ಸರಿಯಾಗಿ ಪೇಮೆಂಟ್ ಕೊಟ್ಟಿದ್ದಾರೆ. ಷೋ ಮುಗಿದ ಮೇಲೆ ಪೇಮೆಂಟ್ ಕೊಡುತ್ತಾರೆ. ಆ ವಿಚಾರದಲ್ಲಿ ಯಾವುದೇ ಕೊರತೆಯಿಲ್ಲ. ಜೀ ಕನ್ನಡದವರು ತಂದೆ- ತಾಯಿ ಪ್ರೀತಿಯನ್ನು ತೋರಿಸುತ್ತಾರೆ. ಕೆಲವು ಜನರು ಹೊರಗಡೆ ಏನೇನೋ ಕೆಟ್ಟದ್ದಾಗಿ ಹೇಳುತ್ತಾರೆ. ಆದರೆ ಇಲ್ಲಿ ಹಾಗೆ ನಡೆಯುವುದಿಲ್ಲ. ಅವರು ಹೇಳುವುದೆಲ್ಲ ಸುಳ್ಳು. ನಮಗೆ ಏನು ಇಷ್ಟನೋ ಆ ಊಟ ಕೊಡುತ್ತಾರೆ. ಉತ್ತರ ಕರ್ನಾಟಕದಿಂದ ಹಿಡಿದು ಚಿಕನ್ ವರೆಗೂ ಮಾಡಿ ಹಾಕುತ್ತಾರೆ. ಎಲ್ಲವೂ ಫ್ರೀ ಕೊಡುತ್ತಾರೆ. ಮಲಗಲು ಒಳ್ಳೆಯ ವ್ಯವಸ್ಥೆ ಮಾಡುತ್ತಾರೆ” ಎಂದು ಹೇಳಿದ್ದಾರೆ.

ಅಲ್ಲದೆ “ಇಂಥ ಷೋಗಳು ಸ್ಕ್ರಿಪ್ಟೆಡ್ ಎನ್ನುತ್ತಾರೆ, ಆದರೆ ಅದೆಲ್ಲಾ ನಿಜವಲ್ಲ. ನಮ್ಮನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ. ನಾವು ಅಂದುಕೊಂಡಿದ್ದೇ ಬೇರೆ, ಅಲ್ಲಿ ನಡೆಯುವುದೇ ಬೇರೆ. ತುಂಬಾ ಚೆನ್ನಾಗಿ ಇದೆ. ಅಲ್ಲಿ ಬೆರೆತಾಗಲೇ ಗೊತ್ತಾಗುವುದು ಜೀ ಕನ್ನಡಕ್ಕೆ ಬಂದಮೇಲೆ ಇಷ್ಟೆಲ್ಲಾ ನನಗೆ ಸಿಕ್ಕಿದೆ. ನಾನು ಸಾಯುವವರೆಗೂ ಚಿರಋಣಿಯಗಿರುತ್ತೇನೆ. ತಾಯಿ ಪ್ರೀತಿ ಸಿಗುವುದು ಅಷ್ಟು ಸುಲಭವಲ್ಲ, ನನಗೆ ಸಿಕ್ಕಿದೆ. ನಾನು ಪುಣ್ಯವಂತ” ಎಂದು ದ್ಯಾಮೇಶ್ ಹೇಳಿದ್ದಾರೆ.

https://www.instagram.com/reel/DLPx476Szio/?igsh=a3BpdHVoejhzd2p2

ಇದನ್ನೂ ಓದಿ: Viral Video : ಲವರ್ ಜೊತೆಗಿನ ಖಾಸಗಿ ವಿಡಿಯೋವನ್ನು ಗಂಡನಿಗೆ ಕಳಿಸಿದ ಪತ್ನಿ – ಅತ್ತು, ಗೋಳಾಡಿ ಪ್ರಾಣಬಿಟ್ಟ ಗಂಡ!!

Comments are closed.