Belagavi: 9 ನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವು

Share the Article

Belagavi: 9 ನೇ ತರಗತಿ ಓದುತ್ತಿದ್ದ 15 ವರ್ಷದ ಬಾಲಕಿ ಹೃದಯಾಘಾತದಿಂದ ಸಾವಿಗೀಡಾದ ಘಟನೆ ಅಥಣಿ ತಾಲೂಕಿನ ಚಮಕೇರಿ ಗ್ರಾಮದಲ್ಲಿ ನಡೆದಿದೆ. ಆಟವಾಡುವ ಕ್ಷಣದಲ್ಲಿ ಹೃದಯಾಘಾತ ಉಂಟಾಗಿ, ಕುಸಿದು ಬಿದ್ದಿದ್ದು, ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆಸ್ಪತ್ರೆಗೆ ತಲುಪುವ ಮೊದಲೇ ಸಾವಿಗೀಡಾಗಿದ್ದಾಳೆ

ರೇಣುಕಾ ಸಂಜಯ ಬಂಡಗಾರ (15) ಮೃತ ಬಾಲಕಿ. ಈಕೆ ಚಮಕೇರಿ ಗ್ರಾಮದ ಖಾಸಗಿ ಶಾಲೆಯ 9 ನೇ ತರಗಿಯಲ್ಲಿ ಕಲಿಯುತ್ತಿದ್ದಳು. ಬೆಳಗಿನ ಸಮಯ ಶಾಲಾ ಆವರಣದಲ್ಲಿ ಸಹಪಾಠಿಗಳ ಜೊತೆ ಆಟವಾಡುತ್ತಿದ್ದ ಈಕೆ ಅಸ್ವಸ್ಥಳಾಗಿ ಬಿದ್ದಿದ್ದಾಳೆ. ಪೋಷಕರ ಸಹಕಾರದಿಂದ ಕೂಡಲೇ ಆಕೆಯನ್ನು ಅಥಣಿ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಯಿತು. ಆದರೆ ಆಕೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.

Comments are closed.