Chinnaswamy Stadium Stampede: ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ಪ್ರಕರಣ: ಸರಕಾರದಿಂದ ಅಧಿಕಾರಿಗಳ ಸಸ್ಪೆಂಡ್‌ ನಿರ್ಧಾರ, ನ್ಯಾಯಮಂಡಳಿ ಪ್ರಶ್ನೆ

Share the Article

Chinnaswamy Stadium Stampede: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ನಡೆದ ಕಾಲ್ತುಳಿತದಲ್ಲಿ 11 ಮಂದಿ ಸಾವಿಗೀಡಾಗಿದ್ದು, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಂದಿನ ಬೆಂಗಳೂರು ಪೊಲೀಸ್‌ ಆಯುಕ್ತ ಬಿ ದಯಾನಂದ್‌ ಸೇರಿ ಐದು ಮಂದಿ ಪೊಲೀಸ್‌ ಅಧಿಕಾರಿಗಳನ್ನು ಸರಕಾರ ಅಮಾನತು ಮಾಡಿತ್ತು. ಇದೀಗ ಸರಕಾರದ ಈ ನಿರ್ಧಾರವನ್ನು ನ್ಯಾಯಮಂಡಳಿ ಪ್ರಶ್ನೆ ಮಾಡಿದ್ದು, ಸರಕಾರಕ್ಕೆ ಚಾಟಿ ಬೀಸಿದೆ.

ಐಪಿಎಸ್‌ ಅಧಿಕಾರಿ ವಿಕಾಸ್‌ ಕುಮಾರ್‌ ಅವರು ತಮ್ಮ ಅಮಾನತು ಮಾಡಿದ ಸರಕಾರದ ಆದೇಶವನ್ನು ಪ್ರಶ್ನೆ ಮಾಡಿ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿಯ ವಿಚಾರಣೆ ಮಾಡಿದ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ, ಮ್ಯಾಜಿಸ್ಟೀರಿಯಲ್‌ ತನಿಖೆ ವರದಿ ಬರುವ ಮುನ್ನ ಅಮಾನತು ಮಾಡಿದ್ದೇಕೆ? ಸಂಭ್ರಮಾಚರಣೆಯನ್ನು ಮಾಡಲು ಪೊಲೀಸರು ಅನುಮತಿ ನೀಡಿಲ್ಲ, ಅಧಿಕಾರಿಗಳ ಅಮಾನತಿಗೆ ಆಧಾರವೇನು ಎಂದು ರಾಜ್ಯ ಸರಕಾರವನ್ನು ಪ್ರಶ್ನೆ ಮಾಡಿ, ಸಿಎಟಿ ಆದೇಶವನ್ನು ಕಾಯ್ದಿರಿಸಿದೆ.

Comments are closed.