EPFO ಸದಸ್ಯರಿಗೆ ಭರ್ಜರಿ ಗುಡ್ ನ್ಯೂಸ್ – ಮುಂಗಡ ಮಿತಿ 1 ಲಕ್ಷದಿಂದ 5 ಲಕ್ಷ ರೂ.ಗೆ ಹೆಚ್ಚಳ

EPFO ಸದಸ್ಯರಿಗೆ ಕೇಂದ್ರ ಸರ್ಕಾರವು ಭರ್ಜರಿ ಗುಡ್ ನ್ಯೂಸ್ ಒಂದನ್ನು ನೀಡಿದ್ದು, ನೌಕರರ ಭವಿಷ್ಯ ನಿಧಿ ಸಂಸ್ಥೆಯ ಸದಸ್ಯರಿಗೆ ಪ್ರಮುಖ ನವೀಕರಣವೊಂದರಲ್ಲಿ ಇಪಿಎಫ್‌ಒ ಮುಂಗಡ ಕ್ಲೈಮ್‌ಗಳ ಆಟೋ-ಸೆಟಲ್‌ಮೆಂಟ್ ಮಿತಿಯನ್ನು 1 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳಿಗೆ ಹೆಚ್ಚಿಸಿದೆ.

ಈ ಮುನ್ನ EPFO ಸದಸ್ಯರಿಗೆ ತ್ವರಿತ ಆರ್ಥಿಕ ನೆರವು ನೀಡಲು ಕೋವಿಡ್-19 ಸಮಯದಲ್ಲಿ ಇಪಿಎಫ್‌ಒ ಮೊದಲು ಮುಂಗಡ ಕ್ಲೈಮ್‌ಗಳ ಸ್ವಯಂ-ಇತ್ಯರ್ಥವನ್ನು ಪರಿಚಯ ಮಾಡಿತ್ತು. ಇದೀಗ ಈ ನಿಯಮಗಳನ್ನು ಇನ್ನಷ್ಟು ನವೀಕರಿಸಲಾಗಿದ್ದು,ಇಪಿಎಫ್‌ಒ ಮುಂಗಡ ಕ್ಲೈಮ್‌ಗಳ ಆಟೋ ಸೆಟ್ಟಲ್ಮೆಂಟ್ ಮಿತಿಯನ್ನು 1 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.
ಏಪ್ರಿಲ್ 2025 ರಲ್ಲಿ ಇಪಿಎಫ್‌ಒ ಸುಮಾರು 8.49 ಲಕ್ಷ ಹೊಸ ಚಂದಾದಾರರನ್ನು ದಾಖಲಿಸಿಕೊಂಡಿದೆ, ಇದು ಮಾರ್ಚ್ 2025 ಕ್ಕಿಂತ ಶೇ. 12.49 ರಷ್ಟು ಹೆಚ್ಚಳವನ್ನು ಪ್ರತಿನಿಧಿಸುತ್ತದೆ. ಹೊಸ ಚಂದಾದಾರರ ಈ ಹೆಚ್ಚಳಕ್ಕೆ ಹೆಚ್ಚುತ್ತಿರುವ ಉದ್ಯೋಗಾವಕಾಶಗಳು, ಉದ್ಯೋಗಿ ಪ್ರಯೋಜನಗಳ ಬಗ್ಗೆ ಹೆಚ್ಚಿದ ಅರಿವು ಮತ್ತು ಇಪಿಎಫ್‌ಒನ ಯಶಸ್ವಿ ಸಂಪರ್ಕ ಕಾರ್ಯಕ್ರಮಗಳು ಕಾರಣವೆಂದು ಹೇಳಬಹುದು ಎಂದು ಸಚಿವಾಲಯ ತಿಳಿಸಿದೆ.
Comments are closed.