Yadagiri: LLB ಓದಿದ್ದಾನೆಂದು ದಲಿತ ಯುವಕನ ಮೇಲೆ ದೌರ್ಜನ್ಯ – ಊರಿನ ಬಾಗಿಲಲ್ಲಿ ತಡೆದು ಹಲ್ಲೆ, ವಿಡಿಯೋ ವೈರಲ್

Share the Article

Yadagiri : ದಲಿತ ಯುವಕನೋರ್ವ LLB ಓದಿ ಊರಿಗೆ ಬರುವ ಸಂದರ್ಭದಲ್ಲಿ ಮೇಲ್ಜಾತಿಯವರು ಅವನನ್ನು ತಡೆದು ದೌರ್ಜನ್ಯ ಎಸರಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.

ಹೌದು, instagram ನಲ್ಲಿ ದಲಿತ ಯುವಕ LLB ಮುಗಿಸಿ ಊರಿಗೆ ಬಂದಾಗ ಎದುರಾದ ‘ ಜಾತಿ’ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವೈರಲ್ ಆದ ವಿಡಿಯೋದಲ್ಲಿ ಮೇಲ್ಜಾತಿಯ ಇಬ್ಬರು ದಲಿತ ಯುವಕನನ್ನು ತಡೆದು ನೀನು ಯಾವ ಜಾತಿ, ನಿನ್ನ ಜಾತಿ ಯಾವುದು? ನೀನೇಕೆ ಇಷ್ಟು ಓದಿದೆ ಎಂಬುದಾಗಿ ಆತನ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದು ಕಾಣಬಹುದು. ತಮ್ಮ ಜಾತಿಯ ಹೆಸರನ್ನು ಪ್ರಸ್ತಾಪಿಸುತ್ತಾ ನಾವು ಈ ಜಾತಿಯವರು,ನಾವು ಏನು ಬೇಕಾದರೂ ಮಾಡಬಹುದು ಎಂಬುವ ರೀತಿಯಲ್ಲಿ ಅವರಿಬ್ಬರು ಯುವಕನ ಮೇಲೆ ದೌರ್ಜನ್ಯ ಎಸಗಿದ್ದಾರೆ.

ಇನ್ನು ದಲಿತ ಯುವಕನ ತಾಯಿಯೂ ಕೂಡ ಇರುವುದನ್ನು ಕಾಣಬಹುದು. ಅವರು ಕೂಡ ಆ ಇಬ್ಬರು ಪುರುಷರಲ್ಲಿ ಏನೋ ಬೇಡಿಕೊಳ್ಳುವುದನ್ನು ಕಾಣಬಹುದು. ಸಧ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಅನೇಕರು ನಾನಾ ರೀತಿಯ ಕಾಮೆಂಟ್ಗಳನ್ನು ಹಾಕುತ್ತಿದ್ದಾರೆ.

https://www.instagram.com/reel/DLPWHSkyRHr/?igsh=MTA2b3J2NjdhcXlzYw==

ಇದನ್ನೂ ಓದಿ: Ration Card: ರಾಜ್ಯದ ʼಪಡಿತರ ಚೀಟಿʼ ದಾರರಿಗೆ ಸಿಹಿಸುದ್ದಿ

Comments are closed.