Home News Malappuram: ಮನೆಗೋಡೆಗೆ ಸಿಲುಕಿದ 11 ವರ್ಷದ ಬಾಲಕನ ಶರ್ಟ್‌ ಕಾಲರ್‌: ಬಾಲಕ ಸಾವು

Malappuram: ಮನೆಗೋಡೆಗೆ ಸಿಲುಕಿದ 11 ವರ್ಷದ ಬಾಲಕನ ಶರ್ಟ್‌ ಕಾಲರ್‌: ಬಾಲಕ ಸಾವು

Hindu neighbor gifts plot of land

Hindu neighbour gifts land to Muslim journalist

Malappuram: 11 ವರ್ಷದ ಬಾಲಕನೋರ್ವ ಉಸಿರುಗಟ್ಟಿ ಮೃತಪಟ್ಟ ಘಟನೆ ಕೇರಳದ ಮಲಪ್ಪುರಂನಲ್ಲಿ ನಡೆದಿದೆ.

ಮಣಿಕಂಠನ್‌ ಮತ್ತು ದಿವ್ಯಾ ದಂಪತಿಯ ಪುತ್ರ 6ನೇ ತರಗತಿಯ ಧ್ವನಿತ್‌ (11) ಮೃತ ಬಾಲಕ.

ಜೂ.20 ರ ಶುಕ್ರವಾರ ಸಂಜೆ ಈ ದುರ್ಘಟನೆ ನಡೆದಿದೆ. ಧನ್ವಿತ್‌ ತನ್ನ ಮನೆಯ ಕೋಣೆಯಲ್ಲಿ ಒಬ್ಬನೇ ಇದ್ದಿದ್ದು, ಮಲಗುವ ಕೋಣೆಯ ಗೋಡೆಗೆ ಮೊಳೆ ಬಡಿಯಲಾಗಿತ್ತು. ಧನ್ವಿತ್‌ ಶರ್ಟ್‌ ಕಾಲರ್‌ ಗೋಡೆಯಲ್ಲಿದ್ದ ಮೊಳೆಗೆ ಸಿಲಿಕಿದೆ. ಕುತ್ತಿಗೆಗೆ ಬಟ್ಟೆ ಬಿಗಿಯಾಗಿ, ಬಾಲಕನಿಗೆ ಉಸಿರುಗಟ್ಟಿದೆ.

ಧನ್ವಿತ್‌ ಬೊಬ್ಬೆ ಹಾಕಿದ್ದಾನೆ, ಕೂಡಲೇ ತಂದೆ ಮಣಿಕಂಠನ್‌ ಕೋಣೆಗೆ ಓಡಿ ಹೋಗಿದ್ದು, ಶರ್ಟ್‌ ಕಾಲರ್‌ನಿಂದ ನೇತಾಡುವುದನ್ನು ಗಮನಿಸಿ ಅವನನ್ನು ಇಳಿಸಿ ತಿರೂತಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಕೋಝಿಕ್ಕೋಡ್‌ನಲ್ಲಿರುವ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅಲ್ಲಿ ಬಾಲಕನ ಸ್ಥಿತಿ ಗಂಭೀರವಾಗಿದೆ.

ಧನ್ವಿತ್‌ ಶನಿವಾರ (ಜೂ.21) ರ ಸಂಜೆ ಮೃತ ಪಟ್ಟಿದ್ದಾನೆ. ಬಾಲಕನ ಮರಣೋತ್ತರ ಪರೀಕ್ಷೆ ಕೋಝಿಕ್ಕೋಡ್‌ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ.

ಇದನ್ನೂ ಓದಿ: Iran-Israel War: ಇರಾನ್ ಮತ್ತು ಇಸ್ರೇಲ್ ನಡುವೆ ‘ಸಂಪೂರ್ಣ ಮತ್ತು ಸಮಗ್ರ’ ಕದನ ವಿರಾಮ – ಟ್ರಂಪ್ ಘೋಷಣೆ