CET: ಜೂ.28 ರಂದು ‘ಸಿಇಟಿ’ ಸೀಟು ಹಂಚಿಕೆ ಕುರಿತು ಮಾರ್ಗದರ್ಶನ ಕಾರ್ಯಗಾರ

Share the Article

CET: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ವತಿಯಿಂದ ಜೂನ್, 28 ರಂದು ಬೆಳಗ್ಗೆ 9.30 ರಿಂದ ಮಧ್ಯಾಹ್ನ 1.30 ಗಂಟೆವರೆಗೆ ಕುಶಾಲನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ‘ಸಿಇಟಿ’ ಸೀಟು ಹಂಚಿಕೆ ಕುರಿತು ಮಾರ್ಗದರ್ಶನ (ನ್ಯೂ ಸೀಟ್ ಸೆಲೆಕ್ಷನ್ ಪ್ರೋಸೆಸ್) ಕಾರ್ಯಗಾರ ನಡೆಯಲಿದೆ.

ಆದ್ದರಿಂದ ಎಲ್ಲಾ ಯುಜಿ ಸಿಇಟಿ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಹಾಜರಾಗಿ ಸೀಟು ಹಂಚಿಕೆಯ ಮಾರ್ಗದರ್ಶನದ ಕಾರ್ಯಗಾರ ಸದುಪಯೋಗ ಪಡೆಯಲು ಕೋರಿದೆ.

ಜಿಲ್ಲೆಯ ಮತ್ತು ನೆರೆ ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ವಿವಿಧ ಕಾಲೇಜುಗಳಲ್ಲಿ ಪಿಯುಸಿ, ವಿಜ್ಞಾನ ವಿಭಾಗದಲ್ಲಿ ಅಭ್ಯಾಸ ಮಾಡಿದ್ದು, ಸಿಇಟಿ ಪರೀಕ್ಷೆ ಬರೆದಿರುವ ತಮ್ಮ ಕಾಲೇಜಿನ ವಿದ್ಯಾರ್ಥಿಗಳ ಗಮನಕ್ಕೆ ತರಲು ಪಿಯು ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಸಹಕರಿಸುವಂತೆ ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಕೆ.ಐ.ಪರಶಿವಮೂರ್ತಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Mangaluru Airport: ಮಂಗಳೂರು ವಿಮಾನ ನಿಲ್ದಾಣದಿಂದ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ

Comments are closed.