Moodabidri: 36 ವರ್ಷಗಳ ನಂತರ ತಾಯಿ ಬಳಿಗೆ ಬಂದ ಮಗ: ನಿಜವಾದ ಮಂತ್ರದೇವತೆಯ ನುಡಿ

Share the Article

Moodabidri: ಕೆಲಸಕ್ಕೆಂದು ಮುಂಬಯಿಗೆ ಹೋದ ಮಗನೋರ್ವ ಮೂವತ್ತಾರು ವರ್ಷಗಳ ಹಿಂದೆ ಹೋಗಿದ್ದು, ಮಾನಸಿಕ ಸಮಸ್ಯೆಯಿಂದ ತನ್ನ ಮನೆಯವರ ಸಂಪರ್ಕ ಕಳೆದುಕೊಂಡಿದ್ದು, ನಂತರ ಇರುವೈಲು ಗ್ರಾಮದ ಚಂದ್ರಶೇಖರ ಮತ್ತೆ ಊರಿಗೆ ಬಂದು ತಾಯಿ ಮಡಿಲು ಸೇರಿದ ಹೃದಯಸ್ಪರ್ಶಿ ಘಟನೆ ನಡೆದಿದೆ.

ಇರುವೈಲು ಕೊನ್ನೆಪದವು ಮಧುಗಿರಿವನದ ಸಂಕಪ್ಪ ಮತ್ತು ಗೋಪಿ ಅವರಿಗೆ ಮೂವರು ಪುತ್ರರು, ಇಬ್ಬರು ಪುತ್ರಿಯವರು. ಹಿರಿಯವರು ಚಂದ್ರಶೇಖರ ಎಂಬುವವರು. ಇವರು ಊರು ಬಿಟ್ಟು ಮುಂಬಯಿಯಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದು, ನಂತರ ಇವರ ಆರೋಗ್ಯದಲ್ಲಿ ಸಮಸ್ಯೆ ಉಂಟಾಯಿತು. ನಂತರ ಮಾನಸಿಕ ಅನಾರೋಗ್ಯಕ್ಕೊಳಗಾಗ ಊರನ್ನೇ ಮರೆತು ಬಿಟ್ಟರು.

ಇವರ ಈ ಪರಿಸ್ಥಿತಿಯನ್ನು ಗಮನಿಸಿದ ಬಾಲು ಕಾಂಬ್ಳೆ ಎಂಬ ಮರಾಠಿ ಕುಟುಂಬದವರು ಕರೆದುಕೊಂಡು ಹೋಗಿದ್ದಾರೆ. ನಂತರ ಅವರ ಆರೋಗ್ಯದಲ್ಲಿ ಸುಧಾರಣೆ ಆಗಿದೆ. ಹೋಟೆಲ್‌ನಲ್ಲಿ ನಂತರ ಕೆಲಸಕ್ಕೆ ಸೇರಿಕೊಂಡರು. ಇರುವೈಲ್‌ನಲ್ಲಿರುವ ಮನೆಮಂದಿ ಚಂದ್ರಶೇಖರ ಅವರನ್ನು ಕುಟುಂಬದವರ ಜೊತೆ ಸೇರಿಸಲು ಸತತ ಪ್ರಯತ್ನ ಮಡುತ್ತಲೇ ಇದ್ದರು.

ಇತ್ತ ಕಡೆ ಮಂತ್ರದೇವತೆಯ ದರ್ಶನದ ಸಮಯದಲ್ಲಿ ದೈವವು ʼಮಗ ಬದುಕಿದ್ದು, ಮನೆಗೆ ಬರುತ್ತಾನೆ. ಮುಂದೆ ನಡೆಯುವ ದೈವದ ದರ್ಶನದಲ್ಲಿ ಹಿರಿಯ ಮಗನ ಉಪಸ್ಥಿತಿ ಇರುತ್ತದೆ. ಆತನಿಂದ ದೈವದ ಚಾಕರಿ ನಡೆಯುತ್ತದೆʼ ಎಂದು ದೈವ ಅಭಯ ನೀಡಿತ್ತು.

ನಂತರ ಇರುವೈಲು ಸಮೀಪದ ಕುಪ್ಪೆಟ್ಟು ಎಂಬಲ್ಲಿ ಬ್ರಹ್ಮಕಲಶ ಸಂದರ್ಭ ಮುಂಬಯಿಯಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬರು ಊರಿನ ವ್ಯಕ್ತಿಯಾಗಿದ್ದು, ಇವರು ಚಂದ್ರಶೇಖರ ಅವರ ಸುಳಿವನ್ನು ನೀಡಿದ್ದರು. ನಂತರ ಇವರ ಸಂಪರ್ಕ ಮಾಡಿ. ದೈವ ದರ್ಶನದ ಮೂರು ದಿನಗಳ ಮೊದಲು ಮೇ 29 ರಂದು ತನ್ನ ಹುಟ್ಟೂರು, ತಾಯಿ ಮನೆಗೆ ಸೇರಿದ್ದಾರೆ.

ಚಂದ್ರಶೇಖರ ಅವರ ತಾಯಿಗೆ 80 ವರ್ಷ. ಮಗನಿಗೆ 60 ವರ್ಷ. ಮಗನ ಬರುವಿಕೆಯಿಂದ ತಾಯಿಗೆ ಆದ ಸಂತೋಷ ಅಷ್ಟಿಷ್ಟಲ್ಲ. ದೈವ-ದೇವರ ಕೆಲಸ, ಸಮಾರಂಭಗಳಿಗೆ ತಪ್ಪದೇ ಬರುತ್ತೇನೆ. ನಾನು ದೈವದ ಕೃಪೆಯಿಂದ ಕುಟುಂಬ ಸೇರಿದ್ದು, ಮುಂಬಯಿಯಲ್ಲಿ ದುಡಿಯಬೇಕೆಂದಿದ್ದೇನೆ. ಮನೆಯವರ ಸಂಪರ್ಕದಲ್ಲಿರುತ್ತೇನೆ ಎಂದು ಚಂದ್ರಶೇಖರ ಅವರ ಹೇಳಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Viral Video : ಅಂಗಡಿ ನೋಡಿಕೊಳ್ಳುತ್ತಿದ್ದ ಅಜ್ಜಿಯನ್ನು ATM ಕಾಯಲು ನೇಮಕ – ಅಂಗಡಿ ನನ್ನದೆಂದು ATM ಒಳಗೆ ಯಾರನ್ನು ಬಿಡದ ಅಜ್ಜಿ, ವಿಡಿಯೋ ವೈರಲ್

Comments are closed.