Viral Video : ಚಾಮುಂಡಮ್ಮ ಈ ರಾಜಕಾರಣಿಗಳಿಗೆ ವಾಂತಿ, ಭೇದಿ ಕೊಡವ್ವ – ಚಾಮುಂಡೇಶ್ವರಿ ದೇವಾಲಯದ ನಿಂತು ಭಕ್ತನ ಆಕ್ರೋಶ!!

Share the Article

Viral Video : ಮೈಸೂರಿನ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದ ಮುಂದೆ ನಿಂತು ಭಕ್ತರು ಒಬ್ಬರು ರಾಜಕಾರಣಿಗಳ ಕುರಿತು ಆಕ್ರೋಶ ವ್ಯಕ್ತಪಡಿಸಿ, ನಾಡಿನ ರಾಜಕಾರಣಿಗಳಿಗೆ ವಾಂತಿಭೇದಿ ಕೊಡವ್ವ ಎಂದು ಬೇಡಿಕೊಂಡ ವಿಚಿತ್ರ ಘಟನೆ ನಡೆದಿದೆ.

ಭಕ್ತರೊಬ್ಬರು ಚಾಮುಂಡೇಶ್ವರಿ ದೇವಾಲಯದ ಎದುರುಗಡೆ ನಿಂತು ರಾಜಕಾರಣಿಗಳ ಅಜಾಗರಕತೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಈ ವೇಳೆ ರೋಷಾವೇಶಗೊಂಡ ಅವರು ಚಾಮುಂಡಮ್ಮ ಈ ರಾಜಕಾರಣಿಗಳಿಗೆ ವಾಂತಿ ಭೇದಿಯನ್ನು ಕೊಡವ್ವ. ಇಲ್ಲ ಅಂದರೆ ತ್ರಿಶೂಲ ತಗೊಂಡು ಚುಚ್ಚವ್ವ ಎಂದು ಹಳ್ಳಿಯ ಸೊಗಡಿನಲ್ಲಿ ಮಾತನಾಡಿರುವುದನ್ನು ಕಾಣಬಹುದು.

ಸಾವಿರಾರು ಕಿಲೋಮೀಟರ್ ಗಳಿಂದ ಭಕ್ತಾದಿಗಳು ನಿನ್ನನ್ನು ನೋಡಲು ಬರುತ್ತಿದ್ದಾರೆ. ಆದರೆ ಬೆಟ್ಟದಲ್ಲಿ ನಿನ್ನ ಎದುರುಗಡೆ ಅನ್ಯಾಯವಾಗುತ್ತಿದೆ. ಇಲ್ಲಿ ಜನರಿಗೆ ಕುಡಿಯಲು ನೀರಿಲ್ಲ. ಇನ್ನೊಬ್ಬರು ಅಜ್ಜಿಗೆ ನಾಲ್ಕು ವರ್ಷಗಳಿಂದ ಕುಡಿಯಲು ನೀರ ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ರಾಜಕಾರಣಿಗಳೇ ದೇವಿ ನಿಮಗೆ ಅಧಿಕಾರ ಕೊಟ್ಟಿರುವುದು ನಿಮ್ಮನ್ನು ಪರೀಕ್ಷೆ ಮಾಡಲು. ಮನೆಹಾಳು ಕೆಲಸವನ್ನು ಬಿಡಿ. ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿ. ಮುಖ್ಯಮಂತ್ರಿಗಳ ಕ್ಷೇತ್ರ ಎಂದು ಕೊಚ್ಚಿಕೊಳ್ಳುತ್ತೀರಿ, ಆದರೆ ಇಲ್ಲಿ ಯಾವುದೇ ರೀತಿಯ ವ್ಯವಸ್ಥೆಗಳು ಇಲ್ಲ. ನಿಮ್ಮ ಸ್ವಾರ್ಥಕ್ಕಾಗಿ ಎಲ್ಲವನ್ನು ಹಾಳು ಮಾಡಿಕೊಳ್ಳುತ್ತೀರಿ ಹಾಳು ಮಾಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

https://www.instagram.com/reel/DLKIkezzmi_/?igsh=dmlsZTdqb3hteTNp

ಇದನ್ನೂ ಓದಿ: Indigo Plane: ಟೇಕಾಫ್ ಆಗುವ ಮುನ್ನ ಇಂಡಿಗೊ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ : ಇಂದೋರ್-ಭುವನೇಶ್ವರ ವಿಮಾನ ವಿಳಂಬ

Comments are closed.