Home News War: ಇಸ್ರೇಲ್ ಇರಾನ್ ಯುದ್ಧಕ್ಕೆ ಕಾರಣ ಆ ಒಬ್ಬ ಮಹಿಳೆ!! ಯಾರಾಕೆ?

War: ಇಸ್ರೇಲ್ ಇರಾನ್ ಯುದ್ಧಕ್ಕೆ ಕಾರಣ ಆ ಒಬ್ಬ ಮಹಿಳೆ!! ಯಾರಾಕೆ?

Hindu neighbor gifts plot of land

Hindu neighbour gifts land to Muslim journalist

War: ಇರಾನ್ ಮತ್ತು ಇಸ್ರೇಲ್ ಯುದ್ಧದ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಮೂರನೇ ಯುದ್ಧಕ್ಕೆ ಇದು ನಾಂದಿ ಹಾಡುತ್ತದೆಯೋ ಎಂಬ ಆತಂಕ ಕೂಡ ಎದುರಾಗಿದೆ. ಈ ನಡುವೆ ಅಮೆರಿಕ ಏಕಾಏಕಿ ಇರಾನ್ ಮೇಲೆ ದಾಳಿ ನಡೆಸಿದ್ದು ಈ ಆತಂಕ ಇನ್ನೂ ಹೆಚ್ಚಾಗಿದೆ. ಇನ್ನು ಅಚ್ಚರಿಯ ವಿಚಾರ ಏನಂದರೆ ಇರಾನ್ ನ ಇಂದಿನ ಪರಿಸ್ಥಿತಿಗೆ ಕಾರಣ ಒಬ್ಬ ಮಹಿಳೆಯಂತೆ!!

ಹೌದು, ಇರಾನ್ ಮೇಲೆ ಇಸ್ರೇಲ್ ಕತ್ತಿ ಮಸಯಲು ಕಾರಣ ಆ ಒಬ್ಬ ಮಹಿಳೆ ಎಂದು ವಿಶ್ಲೇಷಿಸಲಾಗುತ್ತಿದೆ. ಈಕೆಯ ಹೆಸರು ಕ್ಯಾಥರಿನ್ ಪೆರೆಜ್ ಶಕ್ದಮ್. ಈಕೆ ಮೂಲತಃ ಫ್ರಾನ್ಸ್ ನವಳು. ಈಕೆ ಫ್ರಾನ್ಸ್ ನ ಯಹೂದಿ ಕುಟುಂಬದವಳು. ಲಂಡನ್ ವಿವಿಯಲ್ಲಿ ಆರ್ಥಿಕ ಮತ್ತು ಸಂವಹನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದ ಮಹಿಳೆ.

ಎರಡು ವರ್ಷದ ಹಿಂದೆ ಮೊಸಾದ್ ನಿಂದ ತರಬೇತಿ ಪಡೆದು ಶಿಯಾ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿ ಇರಾನ್ ಪ್ರವೇಶಿಸಿದ್ದಳು. ಬಳಿಕ ಇರಾನ್ ನ ಉನ್ನತಾಧಿಕಾರಿಗಳ ಪರಿಚಯ ಮಾಡಿಕೊಂಡಿದ್ದಳು. ಪತ್ರಕರ್ತೆ, ಬರಹಗಾರ್ತಿಯಾಗಿ ಇರಾನ್ ಪರಮೋಚ್ಛ ನಾಯಕ ಖಮೈನಿ ನಿರ್ಧಾರಗಳನ್ನು ಸಮರ್ಥಿಸಿಕೊಳ್ಳುವಂತೆ ಬರೆದು ನಂಬಿಸಿದ್ದಳು.

ಇದೇ ಕಾರಣಕ್ಕೆ ಈಕೆ ಸೇನೆಯ ಉನ್ನತ ಕಮಾಂಡರ್ ಗಳನ್ನು, ಅಧಿಕಾರಿಗಳನ್ನು ಸುಲಭವಾಗಿ ಭೇಟಿ ಮಾಡಲು ಸಾಧ್ಯವಾಯಿತು. ಸಾಮಾನ್ಯರು ಪ್ರವೇಶಿಸದ ಸ್ಥಳಗಳಿಗೂ ಈಕೆಗೆ ಹೋಗಲು ಸಾಧ್ಯವಾಗುತ್ತಿತ್ತು. ಈ ಮೂಲಕ ಇರಾನ್ ನ ಸೇನಾ ಮಾಹಿತಿಯನ್ನು ಇಸ್ರೇಲ್ ಗೆ ರವಾನಿಸುತ್ತಿದ್ದಳು. ಇದರಿಂದಾಗಿ ಸೇನೆಯ ಉನ್ನತ ಕಮಾಂಡರ್ ಗಳನ್ನು ಇಸ್ರೇಲ್ ಸುಲಭವಾಗಿ ಹೊಡೆದು ಹಾಕಲು ಸಾಧ್ಯವಾಯಿತು.

ಇಸ್ರೇಲ್ ಇಷ್ಟು ನಿಖರವಾಗಿ ತಮ್ಮ ಸೇನಾಧಿಕಾರಿಗಳು, ನೆಲೆಗಳನ್ನು ಪತ್ತೆ ಮಾಡಿ ದಾಳಿ ನಡೆಸುತ್ತಿದ್ದರಿಂದ ಅನುಮಾನಗೊಂಡು ಇರಾನ್ ಗುಪ್ತಚರ ಸಂಸ್ಥೆ ತನಿಖೆ ನಡೆಸಿತು. ಆಗ ಈ ಮಹಿಳೆ ಬಗ್ಗೆ ಅವರಿಗೆ ತಿಳಿದುಬಂದಿದೆ. ಆದರೆ ಆಕೆಯನ್ನು ಬಂಧಿಸಬೇಕು ಎನ್ನುವಷ್ಟರಲ್ಲಿ ಕಣ್ಮರೆಯಾಗಿದ್ದಾಳೆ. ಆಕೆ ಎಲ್ಲಿದ್ದಾಳೆ ಎಂಬ ಮಾಹಿತಿ ಈಗ ಯಾರಿಗೂ ಇಲ್ಲ.

 

ಇದನ್ನೂ ಓದಿ: West Bengal: ಅಂತರ್ಜಾತಿ ವಿವಾಹವಾದ ಮಗಳು – ನಮ್ಮ ಪಾಲಿಗೆ ಸತ್ತಳು ಎಂದು ಶ್ರಾದ್ಧ ಕಾರ್ಯ ನಡೆಸಿದ ಪೋಷಕರು