Home News UP: ನದಿಯಲ್ಲಿ ಎಮ್ಮೆಗೆ ಸ್ನಾನ ಮಾಡಿಸುತ್ತಿದ್ದ 13ರ ಬಾಲಕನನ್ನು ಹೊತ್ತೊಯ್ದ ಮೊಸಳೆ !!

UP: ನದಿಯಲ್ಲಿ ಎಮ್ಮೆಗೆ ಸ್ನಾನ ಮಾಡಿಸುತ್ತಿದ್ದ 13ರ ಬಾಲಕನನ್ನು ಹೊತ್ತೊಯ್ದ ಮೊಸಳೆ !!

Hindu neighbor gifts plot of land

Hindu neighbour gifts land to Muslim journalist

UP: ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ಭಾನುವಾರ 13 ವರ್ಷದ ಬಾಲಕನನ್ನು ಮೊಸಳೆಯೊಂದು ಘಾಗ್ರಾ ನದಿಗೆ ಎಳೆದೊಯ್ದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ಭಾನುವಾರ(ಜೂ.22) ಈ ಘಟನೆ ನಡೆದಿದೆ. ರಾಜಾ ಬಾಬು ಅಲಿಯಾಸ್ ನ್ಯಾನ್ ಯಾದವ್ ನಾಪತ್ತೆಯಾಗಿರುವ ಬಾಲಕ.

ರಾಜಾ ಬಾಬು ತನ್ನ ಎಮ್ಮೆಗಳನ್ನು ಸ್ನಾನ ಮಾಡಿಸಲು ನದಿಗೆ ಕರೆದುಕೊಂಡು ಹೋಗಿದ್ದ. ಈ ವೇಳೆ ನದಿ ತೀರದಲ್ಲಿ ಮೊಸಳೆಯೊಂದು ಕಾಣಿಸಿಕೊಂಡಿದ್ದು, ಬಾಲಕನನ್ನು ಘಾಗ್ರಾ ನದಿಗೆ ಎಳೆದುಕೊಂಡು ಹೋಗಿದೆ.

ಬಾಲಕನ ಮೃತದೇಹ ಪತ್ತೆಹಚ್ಚಲು ಅಧಿಕಾರಿಗಳು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ಇಲ್ಲಿಯವರೆಗೆ ಯಾದವ್ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ನದಿಯ ದಡದಲ್ಲಿ ಸ್ಥಳೀಯರು ನಿಂತಿರುವುದನ್ನು ಸಹ ವೀಡಿಯೊ ತೋರಿಸುತ್ತದೆ.

 

 

ಇದನ್ನೂ ಓದಿ: Pak agency: ಪಾಕ್‌ ಐಎಸ್‌ಐ ಪರ ಬೇಹುಗಾರಿಕೆ – ಸೇನಾ ಜವಾನ ಸೇರಿ ಇಬ್ಬರ ಬಂಧನ