Belthangady: ಬೆಳ್ತಂಗಡಿ: ನಿಯಂತ್ರಣ ತಪ್ಪಿ ಮಗುಚಿಬಿದ್ದ ಆಟೋ: ಸಹಸವಾರ ಮೃತ್ಯು

Share the Article

Belthangady: ಬೆಳ್ತಂಗಡಿ (Belthangady) ತಾಲೂಕಿನ ಬದ್ಯಾರು ಸಮೀಪ ಭಾನುವಾರ ಸಂಜೆ ಆಟೋ ಚಾಲಕರೋರ್ವರ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾದ ಪರಿಣಾಮ ಸಹಸವಾರ ಮೃತಪಟ್ಟ ಘಟನೆ ನಡೆದಿದೆ.

 

ಕುಕ್ಕಳ, ಮಾಲಾಡಿ ಗ್ರಾಮದ ಅಣ್ಣು ಹೆಗ್ಡೆ ಅವರ ಪುತ್ರ ಚರಣ್ ಹೆಗ್ಡೆ (33) ಮೃತಪಟ್ಟ ಸಹಸವಾರ.

 

ಚರಣ್ ಗುರುವಾಯನಕೆರೆಯಿಂದ ಅಳದಂಗಡಿ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಘಟನೆ ನಡೆದಿದೆ. ತಕ್ಷಣ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ, ಆಟೋದಲ್ಲಿ ಮೂವರು ಪ್ರಯಾಣಿಕರಿದ್ದರು ಎನ್ನಲಾಗಿದೆ. ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಉಜಿರೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

 

 

ಇದನ್ನೂ ಓದಿ:Mandya: ಡ್ರೋನ್ ಮೂಲಕ ಮಹಿಳೆಯ ಶೌಚದ ದೃಶ್ಯ ಸೆರೆ ಹಿಡಿದ ಕಿಡಿಗೇಡಿಗಳು!!

Comments are closed.