Mandya: ಡ್ರೋನ್ ಮೂಲಕ ಮಹಿಳೆಯ ಶೌಚದ ದೃಶ್ಯ ಸೆರೆ ಹಿಡಿದ ಕಿಡಿಗೇಡಿಗಳು!!

Share the Article

Mandya: ಮಂಡ್ಯದಲ್ಲಿ ಒಂದು ಅಮಾನುಷ ಘಟನೆ ಬೆಳಕಿಗೆ ಬಂದಿದ್ದು ನರೇಗಾ ಯೋಜನೆ ಅಡಿ ಕೆಲಸಕ್ಕೆ ತೆರಳಿದ ಮಹಿಳೆ ಒಬ್ಬಳು ಶೌಚಕ್ಕೆ ಹೋದ ಸಂದರ್ಭ ಡ್ರೋನ್ ಬಳಸಿ ಈ ದೃಶ್ಯವನ್ನು ಕಿಡಿಗೇಡಿಗಳು ಸೆರೆಹಿಡಿದು ವಿಕೃತಿ ಮೆರೆದಿದ್ದಾರೆ.

ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನ ಮಂದಗೆರೆ ಸಮೀಪ ಘಟನೆ ನಡೆದಿದೆ. ಅಂದಹಾಗೆ ಮಂದಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇವಿನಹಳ್ಳಿ ಅಮಾನಿಕೆರೆ ಹೂಳೆತ್ತುವ ಕಾರ್ಯ ಕೈಗೊಳ್ಳಲಾಗಿದ್ದು, ಸುತ್ತಲಿನ ವಿವಿಧ ಗ್ರಾಮಗಳ 100ಕ್ಕೂ ಅಧಿಕ ಮಹಿಳೆಯರು ಹೊಳೆತ್ತುವ ಕಾರ್ಯದಲ್ಲಿ ತೊಡಗಿದ್ದರು. ಕಾಮಗಾರಿಯ ವೇಳೆ ಕೆಲವು ಮಹಿಳಾ ಕಾರ್ಮಿಕರು ಶೌಚಕ್ಕೆ ತೆರಳಿದಾಗ ವಿಕೃತ ಮನಸ್ಸಿನ ಕಿಡಿಗೇಡಿಗಳು ಕೆರೆ ಏರಿ ಮೇಲೆ ನಿಂತು ಡ್ರೋನ್ ಕ್ಯಾಮರಾ ಬಳಸಿ ಚಿತ್ರೀಕರಣ ಮಾಡಿದ್ದಾರೆ. ಶೌಚಕ್ಕೆ ತೆರಳಿದ ವೇಳೆ ಡ್ರೋನ್ ಹಾರಾಡುತ್ತಿರುವುದನ್ನು ಕಂಡ ಕೂಲಿ ಕಾರ್ಮಿಕ ಮಹಿಳೆಯರು ಕೂಗಿಕೊಂಡು ಬರುವಷ್ಟರಲ್ಲಿ ಕಿಡಿಗೇಡಿಗಳು ಪರಾರಿಯಾಗಿದ್ದಾರೆ.

ಡ್ರೋನ್ ಬಳಸಿ ಶೌಚ ದೃಶ್ಯವನ್ನು ಸೆರೆಹಿಡಿದವರು ಕಾರ್, ಬೈಕ್ ಗಳಲ್ಲಿ ಪರಾರಿಯಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ನೂರಾರು ನರೇಗಾ ಕೂಲಿ ಕಾರ್ಮಿಕ ಮಹಿಳೆಯರು ಸ್ಥಳದಲ್ಲೇ ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ:Tragedy : ಆಗಸದಲ್ಲೇ ಹಾಟ್ ಏರ್ ಬಲೂನ್ ಬ್ಲಾಸ್ಟ್ – 8 ಮಂದಿ ಸಜೀವ ದಹನ, ಭಯಾನಕ ವಿಡಿಯೋ ವೈರಲ್

Comments are closed.