Karnataka: ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಜಿ ಆಹ್ವಾನ!

Share the Article

Karnataka: ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗ (ಕರ್ನಾಟಕ-ಕೇರಳ ಪ್ರದೇಶ, ಭಾರತ ಸರ್ಕಾರ) ಬೆಂಗಳೂರು, ಇವರು ವಿವಿಧ ನಾನ್ ಗೆಜೆಟೆಡ್ ಗ್ರೂಪ್ ‘ಬಿ’ ಮತ್ತು ಗ್ರೂಪ್ ‘ಸಿ’ 14,582 ಹುದ್ದೆಗಳ ನೇಮಕಾತಿಗಾಗಿ ಸಂಯೋಜಿತ ಪದವಿ ಮಟ್ಟದ ಪರೀಕ್ಷೆ (ಅಉಐಇ) ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು.

ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ, ನಿರ್ದಿಷ್ಟ ಹುದ್ದೆಗಳ ಅಪೇಕ್ಷಣೀಯ ಅರ್ಹತೆಯ ವಿವರಗಳಿಗೆ ಎಸ್‍ಎಸ್‍ಸಿ ಅಧಿಸೂಚನೆಯ ಪ್ಯಾರಾ-8 ಅನ್ನು ಪರಿಶೀಲಿಸಬಹುದು.

18 ರಿಂದ 32 ವರ್ಷದೊಳಗಿರಬೇಕು. ನಿರ್ದಿಷ್ಟ ವರ್ಗದವರಿಗೆ ವಯೋಮಿತಿ ಸಡಿಲಿಕೆ ಇರುತ್ತದೆ. ಅಧಿಸೂಚನೆಯ ಪ್ಯಾರಾ-5 ಅನ್ನು ಪರಿಶೀಲಿಸಬಹುದು. ಪರೀಕ್ಷೆಯ ಸಂಭವನೀಯ ದಿನಾಂಕ 2025 ರ ಆಗಸ್ಟ್, 13 ರಿಂದ 30 ರವರೆಗೆ, ಶುಲ್ಕ ರೂ.100, (ಎಸ್ಸಿ/ಎಸ್ಟಿ/ಮಹಿಳೆ/ದಿವ್ಯಾಂಗರು/ಮಾಜಿ ಸೈನಿಕರಿಗೆ ಶುಲ್ಕವಿಲ್ಲ). ಅರ್ಜಿ ಸಲ್ಲಿಸಲು ಜುಲೈ, 04 ರ ಮಧ್ಯಾಹ್ನ 11 ಗಂಟೆಗೆ ಕೊನೆಯ ದಿನವಾಗಿದೆ.

ಹೆಚ್ಚಿನ ಮಾಹಿತಿಗೆ ಉದ್ಯೋಗ ವಿನಿಮಯ ಕಚೇರಿ, ಮಡಿಕೇರಿ ಹಾಗೂ ದೂರವಾಣಿ ಸಂಖ್ಯೆ 9449692691, ವೆಬ್‍ಸೈಟ್ www.ssckkr.kar.nic.in ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಮಂಜುನಾಥ್ ಅವರು ತಿಳಿಸಿದ್ದಾರೆ.

ಇದನ್ನೂ ಓದಿ:Scholarship: ವಿದೇಶಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ!

Comments are closed.