Sullia: ಕೊರಗಜ್ಜ ದೈವದ ನೇಮೋತ್ಸವದಲ್ಲಿ ಮಕ್ಕಳೊಂದಿಗೆ ನರ್ತನದ ವಿಡಿಯೋ ವೈರಲ್: ದೈವ ನರ್ತಕನಿಂದ ಪತ್ರಿಕಾಗೋಷ್ಠಿಯಲ್ಲಿ ಕ್ಷಮೆ ಯಾಚನೆ!

Sullia: ಮಡಿಕೇರಿಯಲ್ಲಿ ನಡೆದ ಒಂದು ಕೊರಗಜ್ಜ ದೈವದ ನೇಮೋತ್ಸವದಲ್ಲಿ ಕೊನೆಯ ಕ್ಷಣದಲ್ಲಿ ನೇಮದಲ್ಲಿ ಭಾಗವಹಿಸಿದ ಮಕ್ಕಳೊಂದಿಗೆ ನಾನು ನರ್ತನ ಮಾಡಿದ್ದು ಆ ನಂತರ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿ ನನ್ನ ಬಗ್ಗೆ ಬೇರೆ ಬೇರೆ ರೀತಿಯ ಚರ್ಚೆಗಳಿಗೆ ಕಾರಣವಾದ ವಿಷಯಕ್ಕೆ ಸಂಬಂಧಿಸಿ ನಾನು ಸಮುದಾಯದ ಎಲ್ಲಾ ಹಿರಿಯ ಕಿರಿಯ ಭಾಂದವರಲ್ಲಿ ಮತ್ತು ಭಕ್ತ ರಲ್ಲಿ ನನ್ನಿಂದ ಆದ ತಪ್ಪಿಗೆ ಕ್ಷಮೆ ಯಾಚಿಸುವುದಾಗಿ ದೈವ ನರ್ತಕ ಜಯರಾಮ ಬೊಳಿಯಮಜಲು ರವರು ಜೂ. 21 ರಂದು ಸುಳ್ಯ( Sullia) ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದ್ದಾರೆ.

ಆ ದಿನದ ಪರಿಸ್ಥಿತಿಯಲ್ಲಿ ಕೊರಗಜ್ಜನನ್ನು ಆವಾಹನೆ ಮಾಡಿಕೊಂಡಿದ್ದ ನನಗೆ ಮೊಮ್ಮಕ್ಕಳ ಪ್ರಾಯದ ಮಕ್ಕಳು ನನ್ನೊಂದಿಗೆ ಹೆಜ್ಜೆ ಹಾಕುವಾಗ ಇದು ತಪ್ಪು ನಡೆ ಅನ್ನಲು ದೈವಿಚ್ಚೆಯೋ ಎಂಬಂತೆ ಹೇಳಲಾಗಲಿಲ್ಲ. ಆದರೆ ಈ ಒಂದು ಅಚಾತುರ್ಯ ನಡೆದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ನನ್ನ ತೇಜೋವಧೆ ಮಾಡಲಾಗಿದೆ. ನನ್ನ ಖಾಸಗಿ ಬದುಕು, ವೃತ್ತಿ ಬದುಕನ್ನು ಟಾರ್ಗೆಟ್ ಮಾಡಿ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿದೆ.
ನನ್ನ ಸಮುದಾಯದ ಜನರು, ದೈವಸೇವೆ ಮಾಡುವ ಇತರ ಸಮುದಾಯದ ಜನರು, ದೈವಭಕ್ತರು ನನ್ನ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಇದರಿಂದ ನನಗೆ ವೃತ್ತಿ ಜೀವನವೇ ಬೇಡ ಎಂದೆನಿಸಿದೆ. ಒಂದು ಕಡೆ ಕಟ್ಟುಕಟ್ಟಳೆ, ಇನ್ನೊಂದು ಕಡೆ ದೈವ ಭಕ್ತ ಸಮಾಜ, ಮತ್ತೊಂದು ಕಡೆ ಮುಗ್ಧ ಮಕ್ಕಳು, ಯಾರನ್ನೂ ಸರಿದೂಗಿಸಲು ಆಗದೆ ಜರ್ಝರಿತನಾಗಿದ್ದೇನೆ. ಈ ಬಗ್ಗೆ ನನ್ನ ಆತ್ಮೀಯರಲ್ಲಿ, ಹಿತೈಷಿಗಳಲ್ಲಿ ನಾನು ಚರ್ಚಿಸಿದ್ದು, ಮಾಧ್ಯಮಗಳ ಮುಖಾಂತರ ಸಮಾಜದ, ಸಮುದಾಯದ ಕ್ಷಮೆ ಕೇಳಿ ಮನಸ್ಸಿನ ಭಾರ ತಗ್ಗಿಸಿಕೊಳ್ಳಲು ಸಲಹೆ ಬಂದ ಹಿನ್ನೆಲೆಯಲ್ಲಿ ಕ್ಷಮೆ ಕೇಳುತ್ತಿದ್ದೇನೆ ಎಂದರು.
ಇದನ್ನೂ ಓದಿ:Karkala: ಕಾರ್ಕಳ: ನಿಟ್ಟೆಯಲ್ಲಿ 4 ಲಕ್ಷ ರೂ. ಮೌಲ್ಯದ ಶ್ರೀಗಂಧದ ಮರ ಕಳವು
Comments are closed.