Puttur: ಬಡವರಿಗೆ ನೆರವಾಗಲು ವೇಷ ಧರಿಸುತ್ತಿದ್ದ ಅಣ್ಣಪ್ಪ ವಿಧಿಯಾಟಕ್ಕೆ ಬಲಿ!

Share the Article

Puttur: ಬನ್ನೂರು ನಿವಾಸಿ ಅಣ್ಣಪ್ಪ ಪುತ್ತೂರು (Puttur) (26 ವ.) ಇವರು ಇಂದು ಬೆಳಿಗ್ಗೆ ಅಲ್ಪ ಕಾಲದ ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.

ಲೋಕಸೇವಾ ಟ್ರಸ್ಟಿನ ಮೂಲಕ ವಿವಿಧ ವೇಷ ಧರಿಸಿ ಹಲವಾರು ಬಡ ಕುಟುಂಬದ ಮಕ್ಕಳಿಗೆ ಮತ್ತು ಆರೋಗ್ಯದ ಸಮಸ್ಯೆ ಇರುವಂತಹ ವ್ಯಕ್ತಿಗಳಿಗೆ ತನ್ನ ಕೈಲಾದಷ್ಟು ಜಾತ್ರೆ ಅಥವಾ ಇನ್ನಿತರ ಕಾರ್ಯಕ್ರಗಳಲ್ಲಿ ವಿವಿಧ ರೀತಿಯ ವೇಷ ಹಾಕಿ ಅದರಲ್ಲಿ ಬಂದಂತಹ ಹಣವನ್ನು ಅವರ ಕೈಗೆ ಒಪ್ಪಿಸುತ್ತಿದ್ದರು.

ತನ್ನದೇ ಆದ ಕಲಾಸಿರಿ ಗೊಂಬೆ ಬಳಗ (ರಿ) ಪುತ್ತೂರು ಇದನ್ನು ಪ್ರಾರಂಭಿಸಿದರು. ವರ್ಷದಲ್ಲಿ ಒಂದು ದಿನ ಗೊಂಬೆ ವೇಷ ಧರಿಸಿ ಅದರಲ್ಲಿ ಬಂದಂತಹ ಹಣವನ್ನು ಬಡಕುಟುಂಬಗಳಿಗೆ ಹಾಗೂ ಅನಾರೋಗ್ಯದಿಂದ ಇರುವ ಕುಟುಂಬಗಳಿಗೆ ಧನಸಹಾಯದ ಮೂಲಕ ಸಹಾಯ ಮಾಡಿದ್ದಾರೆ.

ಇದನ್ನೂ ಓದಿ:ವಿಶ್ವದ ಅತ್ಯಂತ ಸುರಕ್ಷಿತ ವಿಮಾನಯಾನ ಸಂಸ್ಥೆಗಳ ಪಟ್ಟಿ ಬಿಡುಗಡೆ,AIR ಇಂಡಿಯಾ ಇಲ್ಲವೇ ಇಲ್ಲ,ಭಾರತದಲ್ಲಿ ಪ್ರಥಮ ಸ್ಥಾನದಲ್ಲಿ ಅಚ್ಚರಿಯ ಹೆಸರು!

 

 

Comments are closed.