Operation Sindoor: ಶಶಿ ತರೂರ್’ಗೆ ಸರ್ಕಾರದ ಹೊಸ ಟಾಸ್ಕ್, 2ನೇ ಸುತ್ತಿನ ರಾಜ ತಾಂತ್ರಿಕತೆ, ರಷ್ಯಾದತ್ತ ನಿಯೋಗ!

New delhi: ಪಹಲ್ಗಾಮ್ ಉಗ್ರ ದಾಳಿ, ಆ ಬಳಿಕ ಭಾರತ ನಡೆಸಿದ್ದ ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ಸರ್ವಪಕ್ಷ ನಿಯೋಗ ಆರೋಪದೇಶಗಳ ಹೋಗಿ ಭಾರತದ ರಾಜ ತಾಂತ್ರಿಕ ನಿಲುವನ್ನು ಸ್ಪಷ್ಟವಾಗಿ ಮನದಟ್ಟು ಮಾಡಿ ಬಂದಿತ್ತು. ಇದೀಗ ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ಸರ್ವಪಕ್ಷ ನಿಯೋಗ ರಷ್ಯಾದತ್ತ ಮುಖ ಮಾಡಿದೆ.

ಈಗಾಗಲೇ ಹಲವು ರಾಷ್ಟ್ರಗಳ ಪ್ರವಾಸ ಮುಗಿಸಿ ಬಂದ ನಂತರ, ಕೇಂದ್ರ ಸರ್ಕಾರವು ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ಸರ್ವಪಕ್ಷ ನಿಯೋಗವನ್ನು ರಷ್ಯಾ, ಬ್ರಿಟನ್ ಮತ್ತು ಗ್ರೀಸ್ ಮುಂತಾದ ದೇಶಗಳಿಗೆ ಎರಡನೇ ಸುತ್ತಿನ ರಾಜತಾಂತ್ರಿಕತೆಗೆ ನಿಯೋಜಿಸಿದೆ ಎಂಬ ಮಾಹಿತಿ.ಲಭ್ಯವಾಗಿದೆ.
ದಿನಗಳ ಕೆಳಗೆ, ಶುಕ್ರವಾರ ಮಾಸ್ಕೋಗೆ ತೆರಳಿದ್ದ ಸಂಸದ ಶಶಿತರೂರ್ ಎರಡು ವಾರಗಳ ಕಾರ್ಯಾಚರಣೆಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಕಾರ್ಯಾಚರಣೆಯು ಮೂಲಾ ಉದ್ದೇಶ ಮಿತ್ರರಾಷ್ಟ್ರಗಳಲ್ಲಿ ಭಾರತದ ಸ್ಥಾನವನ್ನು ಮತ್ತಷ್ಟು ಬಲಪಡಿಸುವುದು, ಜತೆಗೆ ಭಾರತದ ಜನರ ದೇಶದ ಭಯೋತ್ಪಾದನೆಯ ವಿರುದ್ಧ ದನಿಯನ್ನು ಹೆಚ್ಚಿಸುವುದೇ ಆಗಿದೆ.
ಮುಂದಿನ ಕೆಲ ವಾರಗಳ ಪ್ರವಾಸದಲ್ಲಿ, ತರೂರ್ ವಿವಿಧ ದೇಶಗಳಲ್ಲಿನ ಭಾರತೀಯ ರಾಜತಾಂತ್ರಿಕ ಸಂಪರ್ಕ ಸಾಧಿಸಲಿದ್ದಾರೆ. ಅಮೆರಿಕ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಒಂದು ರೀತಿಯಲ್ಲಿ. ಹತ್ತಿರ ಆಗುವ ಥರ ಗೋಚರಿಸುವ ಹಿನ್ನೆಲೆಯಲ್ಲಿ ಅವರ ರಷ್ಯಾ ಭೇಟಿ ಮಹತ್ವ ಪಡೆದುಕೊಂಡಿದೆ.
ಶಶಿ ತರೂರ್ ನೇತೃತ್ವದ ಸರ್ವಪಕ್ಷ ನಿಯೋಗವು ಅತ್ಯಂತ ಪ್ರಭಾವಶಾಲಿ ನಿಯೋಗಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿತ್ತು, ಜತೆಗೆ ಹಾಗಾಗಿ ಕೇಂದ್ರ ಸರ್ಕಾರವು ಅವರನ್ನು ಮತ್ತೊಂದು ಸುತ್ತಿನ ರಾಜತಾಂತ್ರಿಕತೆಗೆ ಕಳುಹಿಸಲು ಉತ್ಸುಕವಾಗಿದೆ ಎನ್ನಲಾಗಿದೆ.
ಶಶಿ ತರೂರ್ ತಂಡವು ಈ ಹಿಂದೆ ಅಮೆರಿಕಕ್ಕೂ ಭೇಟಿ ನೀಡಿದ್ದು, ಅಲ್ಲಿ ಅವರು ಉಪಾಧ್ಯಕ್ಷ ಜೆ. ಡಿ. ವ್ಯಾನ್ಸ್ ಮತ್ತು ವಿದೇಶಾಂಗ ಉಪ ಕಾರ್ಯದರ್ಶಿ ಕ್ರಿಸ್ಟೋಫರ್ ಲ್ಯಾಂಡೌ ಅವರನ್ನು ಭೇಟಿ ಮಾಡಿದ್ದರು. ಲ್ಯಾಂಡೌ ಭೇಟಿಯ ಸಮಯದಲ್ಲಿ, ತರೂರ್ ತಂಡವು ಭಯೋತ್ಪಾದನೆಯ ವಿರುದ್ಧ ಭಾರತದ ನಿಲುವನ್ನು ಸ್ಪಷ್ಟವಾಗಿ ವಿವರಿಸಿ ಹೇಳಿತ್ತು.
ಇದನ್ನೂ ಓದಿ:Karkala: ಕಾರ್ಕಳ: ನಿಟ್ಟೆಯಲ್ಲಿ 4 ಲಕ್ಷ ರೂ. ಮೌಲ್ಯದ ಶ್ರೀಗಂಧದ ಮರ ಕಳವು
Comments are closed.