Chikkamagaluru: ಕರೆಂಟ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರ್: ಸುಮಾರು 50 ಅಡಿ ದೂರ ಕಂಬ ಸಮೇತ ಎಳೆದೊಯ್ದ ಕಾರ್

Chikkamagaluru: ನಿಯಂತ್ರಣ ತಪ್ಪಿ ಕಾರ್ ಒಂದು ಕರೆಂಟ್ ಕಂಬಕ್ಕೆ ಡಿಕ್ಕಿ ಹೊಡೆದು, ಕಂಬದ ಸಮೇತವಾಗಿ ಸುಮಾರು 50 ಅಡಿ ದೂರ ಎಳೆದೊಯ್ದಿರುವ ಘಟನೆ ಚಿಕ್ಕಗಳೂರಿನಲ್ಲಿ ನಡೆದಿದೆ.

ಜಿಲ್ಲೆಯ ವಸ್ತಾರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಂಬಕ್ಕೆ ಹಾಕಿದ್ದ ಗ್ರೌಂಡಿಂಗ್ ವೈರ್ ಕೂಡ ಕಿತ್ತು ಬಂದಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಅಪಘಾತದ ನಂತರ ವಿದ್ಯುತ್ ಸಂಪರ್ಕ ಕಟ್ ಆಗಿರುತ್ತದೆ ಹಾಗೂ ಈ ಪ್ರಕರಣ ಆಲ್ದೂರು ಠಾಣೆಯಲ್ಲಿ ದಾಖಲಾಗಿದೆ.
Comments are closed.