High Court: ಮಹಿಳೆಯರು ಪಾಸ್ಪೋರ್ಟ್ ಪಡೆದುಕೊಳ್ಳಲು ಸಲ್ಲಿಸುವ ಅರ್ಜಿಗೆ ಪತಿಯ ಅನುಮತಿ ಮತ್ತು ಸಹಿಯ ಅವಶ್ಯಕತೆ ಇಲ್ಲ:ಹೈಕೋರ್ಟ್ ಮಹತ್ವದ ತೀರ್ಪು

High Court: ಮಹಿಳೆಯರು ಪಾಸ್ಪೋರ್ಟ್ ಪಡೆದುಕೊಳ್ಳಲು ಸಲ್ಲಿಸುವ ಅರ್ಜಿಗೆ ಪತಿಯ ಅನುಮತಿ ಮತ್ತು ಸಹಿಯ ಅವಶ್ಯಕತೆ ಇಲ್ಲ ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ.

ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭ ನ್ಯಾಯಮೂರ್ತಿ ಎನ್.ಆನಂದ್ ವೆಂಕಟೇಶ್ ಅವರಿದ್ದ ಪೀಠ ಈ ಆದೇಶ ನೀಡಿದೆ.
2023ರಲ್ಲಿ ನಾವು ವಿಚ್ಛೇದನ ಪಡೆಯಲು ಅರ್ಜಿ ಸಲ್ಲಿಸದ್ದು, ಆದರೆ ಪ್ರಾದೇಶಿಕ ಪಾಸ್ಪೋರ್ಟ್ ವಿತರಣಾ ಕೇಂದ್ರ ಪತಿಯ ಸಹಿ ಇಲ್ಲ ಎನ್ನುವ ಕಾರಣ ನೀಡಿ ಅರ್ಜಿಯನ್ನು ತಿರಸ್ಕರಿಸಿದೆ ಎಂದು ರೇವತಿ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಸಂದರ್ಭದಲ್ಲಿ ಪತಿಯ ಸಹಿ ಬೇಕು ಎನ್ನುವುದು ಮಹಿಳೆಯನ್ನು ಆತಂಕ ಉಂಟು ಮಾಡಿತ್ತು. ಪತಿಯ ಸಹಿ ಪಡೆಯಲು ಹೇಗೆ ಸಾಧ್ಯವಾಗುತ್ತದೆ ಎಂದು ನ್ಯಾಯಪೀಠ ಪ್ರಶ್ನೆ ಮಾಡಿದ್ದು, ಪಾಸ್ಪೋರ್ಟ್‌ಗೆ ಪತಿಯ ಸಹಿ ಅನುಮತಿ ಅಗತ್ಯವಿಲ್ಲ ಎಂದು ತೀರ್ಪು ನೀಡಿದೆ.
Comments are closed.