Bidar: RCB ಗೆದ್ದರೆ ಗಂಡನಿಗೆ ಇನ್ನೊಂದು ಮದುವೆ ಮಾಡಿಸುತ್ತೇನೆ ಅಂದಿದ್ದ ಹೆಂಡತಿ – ಈಗ ಏನಾಗಿದೆ ನೀವೇ ನೋಡಿ

Share the Article

Bidar: ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಆರ್‌ಸಿಬಿ ತಂಡ ಬರೋಬ್ಬರಿ 18 ವರ್ಷಗಳ ಬಳಿಕ ಕಪ್ಪು ಗೆದ್ದು ಕನ್ನಡಿಗರ ಕನಸನ್ನು ನನಸಾಗಿತ್ತು. ಈ ಸಂದರ್ಭದಲ್ಲಿ ಕನ್ನಡಿಗರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಫೈನಲ್ ಪಂದ್ಯಕ್ಕೂ ಮೊದಲು ಆರ್‌ಸಿಬಿ ಏನಾದರೂ ಕಪ್ಪು ಗೆದ್ದರೆ ತಾವು ಏನೆಲ್ಲ ಮಾಡುತ್ತೇವೆ ಎಂದು ಕೆಲವರು ವಿಚಿತ್ರ ವರ್ತನೆಯ ಮೂಲಕ ತೋರ್ಪಡಿಸಿದ್ದರು. ಒಬ್ಬಾಕೆ ಆರ್ಸಿಬಿ ಗೆದ್ದರೆ ನನ್ನ ಪತಿಗೆ ಡಿವೋರ್ಸ್ ಕೊಡುವೆ ಎಂದು ಬ್ಯಾನರ್ ಹಿಡಿದು ನಿಂತದ್ದು ಭಾರಿ ಪ್ರಚಾರ ಪಡೆದುಕೊಂಡಿತ್ತು. ಅಂತೆಯೇ ಬೀದರ್ ನಲ್ಲಿ ಒಬ್ಬ ಮಹಿಳೆ ಆರ್‌ಸಿಬಿ ಏನಾದರೂ ಕಪ್ಪು ಗೆದ್ದರೆ ತಾನು ತನ್ನ ಪತಿಗೆ ಎರಡನೇ ಮದುವೆ ಮಾಡಿಸುವುದಾಗಿ ಘೋಷಿಸಿದ್ದಳು. ಇದೀಗ ಆಕೆಯ ಪಾಡು ಏನಾಗಿದೆ ಗೊತ್ತಾ?

 

ಹೌದು, ಬೀದರ್ನ ಮಹಿಳೆಯೊಬ್ಬಳು RCB ಗೆದ್ದರೆ ತಮ್ಮ ಗಂಡನಿಗೆ ಇನ್ನೊಂದು ಮದುವೆ ಮಾಡಿಸುವುದಾಗಿ ಹೇಳಿದ್ದರು. ಇದು ತಮಾಷೆಯಾಗಿಯೇ ಆಕೆ ಹೇಳಿದ್ದರೂ ಈ ಬಗ್ಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿದ್ದವು. ಇದೀಗ ಅವರ ಪತಿ ಪಾಂಡುರಂಗ ಅವರು ತಮಗೆ ಇನ್ನೊಂದು ಮದುವೆ ಮಾಡಿಸುವಂತೆ ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಅವರು ವಿಡಿಯೋ ಶೇರ್ ಮಾಡಿದ್ದಾರೆ.

 

ಆರ್ಸಿಬಿ ಗೆದ್ದರೆ ನೀನು ನನಗೆ ಇನ್ನೊಂದು ಮದುವೆ ಮಾಡಿಸುವುದಾಗಿ ಹೇಳಿರುವುದನ್ನು ಐದು ಲಕ್ಷ ಮಂದಿ ನೋಡಿದ್ದಾರೆ. ಈಗ ಆರ್ಸಿಬಿ ಗೆದ್ದಿದೆ. ಇದುವರೆಗೂ ನೀನು ನನಗೆ ಮದ್ವೆ ಮಾಡಿಸಿಲ್ಲ. ಇದನ್ನೆಲ್ಲಾ ನಾನು ಕೇಳುವುದಿಲ್ಲ. ಹುಡುಗಿ ಹೇಗಿದ್ರೂ ಪರವಾಗಿಲ್ಲ, ನೀನು ನನಗೆ ಇನ್ನೊಂದು ಮದುವೆ ಮಾಡಿಸಲೇ ಬೇಕು ಎಂದಿದ್ದಾರೆ.

 

ಈ ವಿಡಿಯೋ ಅನ್ನು ಅವರ ತಮಾಷೆಗೆ ಶೇರ್ ಮಾಡಿದ್ದು, ಇದಕ್ಕೆ ತಮಾಷೆಯ ಕಮೆಂಟ್ಗಳೂ ಬರುತ್ತಿವೆ. ಲಾಟರಿ ಹೊಡೆದ್ರಿ ಎಂದು ಕೆಲವರು ತಮಾಷೆ ಮಾಡುತ್ತಿದ್ದರೆ, ನಿಮ್ಮ ಮಾತನ್ನು ನೀವು ಉಳಿಸಿಕೊಳ್ಳಲೇಬೇಕು ಎಂದು ಪತ್ನಿಗೆ ಹೇಳುತ್ತಿದ್ದಾರೆ. ಇದೇ ವೇಳೆ ಅವರ ಪತ್ನಿ ಕೂಡ ನಾಚಿ ನೀರಾಗಿರುವುದನ್ನು ವಿಡಿಯೋದಲ್ಲಿ ನೋಡಬಹುದು.

 

https://www.instagram.com/reel/DKwGv0qvUIg/?igsh=MWpoZTF6OHNiejNz

Comments are closed.