Terrible Tragedy: ನಾಡದೋಣಿ ಮುಳುಗಿ ವಿದ್ಯಾರ್ಥಿಗಳು ಸೇರಿ ಐವರು ಸಾವು

Share the Article

Terrible Tragedy: ನಾಡದೋಣಿಯೊಂದು ಮುಳುಗಿ ವಿದ್ಯಾರ್ಥಿಗಳು ಸೇರಿ ಐವರು ಜಲಸಮಾಧಿಯಾಗಿದ್ದಾರೆ ಎಂದು ವದಿಯಾಗಿದೆ. ಈ ಘಟನೆ ಅಸ್ಸಾಂನಲ್ಲಿ ನಡೆದಿದ್ದು, ಗುರುವಾರ ಬೆಳಗಿನ ಜಾವ ಬ್ರಹ್ಮಪುತ್ರ ನದಿಯಲ್ಲಿ ಪ್ರಯಾಣ ಮಾಡುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.

 

ಪೆರಾಧೋರಾ ಘಾಟ್ನಿಂದ ನಲ್ಬರಿ ಜಿಲ್ಲೆಯ ಲಾರ್ಕುಚಿ ಘಾಟ್ಗೆ ದೋಣಿ ಸಾಗುತ್ತಿದ್ದಾಗ ಗೋಫುಲ್‌ ಅಲಿ (50), 3ನೇ ತರಗತಿ ವಿದ್ಯಾರ್ಥಿ ಅರ್ಯನ್‌ ಅಲಿ (8) ಮತ್ತು ರಾಂಪುರ ಜನತಾ ಶಾಲೆಯ 9 ನೇ ತರಗತಿ ವಿದ್ಯಾರ್ಥಿ ಮಜಿದುಲ್‌ ಇಸ್ಲಾಂ (15) ಸೇರಿ ಐವರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಕಾರ್ಯಾಚರಣೆ ಮಾಡಿ ಮೃತದೇಹಗಳನ್ನು ನೀರಿನಿಂದ ಹೊರಗೆ ತೆಗೆದಿದ್ದಾರೆ.

Comments are closed.