Air India: ಅಪಘಾತಕ್ಕೀಡಾದ ಏರ್‌ಇಂಡಿಯಾ ವಿಮಾನದಲ್ಲಿ ದೋಷ ಇರಲಿಲ್ಲ: ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್

Air India: ಅಹಮದಾಬಾದ್‌ನಲ್ಲಿ ಅಪಘಾತಕ್ಕೀಡಾದ ಏರ್‌ಇಂಡಿಯಾ ವಿಮಾನದಲ್ಲಿ ಯಾವುದೇ ದೋಷಗಳಿಲ್ಲ ಎಂದು ಏರ್ ಇಂಡಿಯಾ ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್ ಹೇಳಿಕೆ ನೀಡಿದ್ದರೆ. ನಿಯಮಿತ ತಪಾಸಣೆಗಳನ್ನು ವಿಮಾನದಲ್ಲಿ ಮಾಡಲಾಗುತ್ತಿತ್ತು ಎಂದು ಹೇಳಿದ್ದಾರೆ. ಈ ಕುರಿತು ಕೇಂದ್ರ ವಾಯುಯಾನ ಸಚಿವಾಲಯ ನಿರ್ಧಾರ ಮಾಡಲಿದೆ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ.

Mysore: ರೂ.1280 ಕಟ್ಟಿಲ್ಲ ಎಂದು 7 ವರ್ಷದ ಹೆಣ್ಣುಮಗುವನ್ನು ಹೊತ್ತೊಯ್ದ ಫೈನಾನ್ಸ್ ಸಿಬ್ಬಂದಿ
2023 ರ ಜೂನ್‌ನಲ್ಲಿ ಕೊನೆಯ ತಪಾಸಣೆ ನಡೆದಿತ್ತು. ಮುಂದಿನ ತಪಾಸಣೆ ಡಿಸೆಂಬರ್‌ನಲ್ಲಿ ಆಗಬೇಕಿತ್ತು. ಬಲಭಾಗದ ಎಂಜಿನ್‌ನ ದುರಸ್ತಿ ಕಾರ್ಯ ಮಾರ್ಚ್‌ನಲ್ಲಿ ನಡೆಸಲಾಗಿತ್ತು. ಎಪ್ರಿಲ್‌ನಲ್ಲಿ ಎಡಭಾಗದ ಎಂಜಿನ್ ಅನ್ನು ಪರಿಶೀಲನೆ ಮಾಡಲಾಗಿತ್ತು. ಲಂಡನ್‌ಗೆ ಹಾರಾಟ ನಡೆಸುವವರೆಗೂ ವಿಮಾನದಲ್ಲಿ ಯಾವುದೇ ದೋಷಗಳಿರಲಿಲ್ಲ ಎಂದು ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಏರ್‌ಇಂಡಿಯಾ ತನ್ನ ವೈಡ್ ಬಾಡಿ ವಿಮಾನಗಳನ್ನು ಬಳಸುವ ಅಂತರರಾಷ್ಟ್ರೀಯ ವಿಮಾನ ಸೇವೆಗಳನ್ನು ಕಡಿತ ಮಾಡಿದೆ. ಈಗಾಗಲೇ ಶೇ.15 ರಷ್ಟು ಸೇವೆ ಕಡಿತ ಮಾಡಲಾಗಿದೆ.
ಇನ್ನುಮುಂದೆ ದ್ವಿಚಕ್ರ ವಾಹನಗಳಿಗೆ ಎಬಿಎಸ್ ಹಾಗೂ ಡಬಲ್ ಹೆಲ್ಮೆಟ್ ಕಡ್ಡಾಯ!
Comments are closed.