Bangalore Bars: ಬೆಂಗಳೂರಿನ 17 ಕ್ಕೂ ಹೆಚ್ಚು ಡ್ಯಾನ್ಸ್‌ಬಾರ್‌ಗಳ ಮೇಲೆ ಪೊಲೀಸರಿಂದ ದಾಳಿ

Share the Article

Bangalore Bars: ಬೆಂಗಳೂರಿನ ಹಲವು ಕಡೆಗಳಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಡ್ಯಾನ್ಸ್‌ಬಾರ್‌ಗಳ ಮೇಲೆ ಗುರುವಾರ ತಡರಾತ್ರಿ ಪೊಲೀಸರು ದಾಳಿ ಮಾಡಿರುವ ಘಟನೆ ನಡೆದಿದೆ. ಕ್ಲಬ್‌ ಒನ್‌, ರಂಬಾ, ಬ್ರಿಗೇಡ್‌ ಬ್ಲೂ ಸೇರಿ 17 ಕ್ಕೂ ಹೆಚ್ಚು ಬಾರ್‌ಗಳ ಮೇಲೆ ದಾಳಿ ಮಾಡಲಾಗಿದೆ. ಅವಧಿ ಮೀರಿ ಕಾರ್ಯಾಚರಿಸುತ್ತಿರುವುದು, ಯುವತಿಯರಿಂದ ಅಶ್ಲೀಲ ನೃತ್ಯ ಸೇರಿ ಹಲವು ನಿಯಮಗಳ ಉಲ್ಲಂಘನೆ ಆರೋಪದಲ್ಲಿ ದಾಳಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಕಬ್ಬನ್‌ ಪಾರ್ಕ್‌, ಅಶೋಕ್‌ ನಗರ, ಎಸ್‌.ಜೆ.ಪಾರ್ಕ್‌, ಉಪ್ಪಾರಪೇಟೆ ಸೇರಿ ವಿವಿಧ ಠಾಣಾ ವ್ಯಾಪ್ತಿಗಳ ಬಾರ್‌ಗಳ ಮೇಲೆ ದಾಳಿ ಮಾಡಲಾಗಿದೆ. ಬೇಂಗಳೂರು ಕೇಂದ್ರವಿಭಾಗ ಹಾಗೂ ಪಶ್ಚಿಮ ವಿಭಾಗದ ಡ್ಯಾನ್ಸ್‌ ಬಾರ್‌ಗಳ ಮೇಲೂ ದಾಳಿ ಮಾಡಲಾಗಿದೆ.

Comments are closed.