Mangaluru: ಜೂನ್‌ 22 ರಂದು ಕೋಸ್ಟಲ್‌ ಫಿಲ್ಮ್‌ ಅವಾರ್ಡ್‌

Share the Article

Mangaluru: ಸ್ಯಾಂಡಿಸ್‌ ಕಂಪನಿ ಅರ್ಪಿಸುವ ಸಿನಿ ಗ್ಯಾಲಕ್ಸಿ ಕೋಸ್ಟಲ್‌ ಫಿಲ್ಮ್‌ ಅವಾರ್ಡ್‌ 2025 ಕಾರ್ಯಕ್ರಮವು ಜೂ.22 ರಂದು ಮಧ್ಯಾಹ್ನ 3 ಗಂಟೆಗೆ ಮೂಲ್ಕಿ ಕೊಳ್ನಾಡ್‌ ಸುಂದರರಾಮ ಶೆಟ್ಟಿ ಸಭಾಭವನದಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮದ ಆಯೋಜಕ ಸಂದೇಶ್‌ ರಾಜ್‌ ಬಂಗೇರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ. 2024 ಜನವರಿಯಿಂದ ಡಿಸೆಂಬರ್‌ವರೆಗೆ ತೆರೆ ಕಂಡಿರುವ ಒಟ್ಟು ಎಂಟು ಸಿನಿಮಾಗಳು ಸ್ಪರ್ಧೆಗೆ ಬಂದಿದೆ. ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸಂಗೀತ ನಿರ್ದೇಶಕ ಗುರುಕಿರಣ್‌, ಕನ್ನಡ ಸಿನಿಮಾ ತಾರೆಯರಾದ ರಚನಾ ರೈ, ವೃಂದಾ ಆಚಾರ್ಯ, ರೂಪೇಶ್‌ ಶೆಟ್ಟಿ, ಪೃಥ್ವಿ ಅಂಬರ್‌, ಸೋನಲ್‌ ಮೊಂತೆರೋ ಹಾಗೂ ತುಳು ಚಿತ್ರರಂಗದ ನಿರ್ಮಾಪಕರು, ತಂತ್ರಜ್ಞರು, ನಟ-ನಟಿಯರು ಭಾಗವಹಿಸಲಿದ್ದಾರೆ.

ತುಳು ಚಿತ್ರರಂಗದ ನಟ, ನಟಿಯರು, ಮತ್ತು ಸಿಸಿಲಿಂಗ್‌ ಗಾಯ್ಸ್‌ ತಂಡದಿಂದ ನೃತ್ಯ, ರಸಮಂಜರಿ, ಕಾಮಿಡಿ ಕಾರ್ಯಕ್ರಮ ನಡೆಯಲಿದೆ. ಶರ್ಮಿಳಾ ಅಮೀನ್‌ ಮತ್ತು ವಿನೀತ್‌ ಕುಮಾರ್‌ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಯಶ್‌ರಾಜ್‌, ಉದಯ ಬಳ್ಳಾಲ್‌, ಪ್ರೀತಮ್‌, ಸಾತ್ವಿಕ್‌ ಪೂಜಾರಿ ಉಪಸ್ಥಿತರಿದ್ದರು.

Comments are closed.