Bengaluru: ಪತ್ನಿ ದುಡ್ಡು ಕೊಡಲಿಲ್ಲ ಎಂಬ ಕಾರಣಕ್ಕೆ ಶಾಲಾ ಕಟ್ಟಡದಲ್ಲಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

Bengaluru: ಪತ್ನಿ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವಾಗ ಘಟನೆ ಬೆಂಗಳೂರಿನ ಅಮೃತ ಹಳ್ಳಿಯ ಮರಿಯಪ್ಪನ ಪಾಳ್ಯದಲ್ಲಿ ನಡೆದಿದೆ.

ತಮಿಳುನಾಡು ಮೂಲದ ರಾಜೇಂದ್ರ (48) ಮೃತ ವ್ಯಕ್ತಿಯಾಗಿದ್ದು, ಖಾಸಗಿ ಶಾಲೆಯೊಂದರ ಕಟ್ಟಡದ ಕಾಮಗಾರಿ ಕೆಲಸ ಮಾಡುತ್ತಿದ್ದು, ಅದೇ ಕಟ್ಟಡದಲ್ಲಿ ನೇಣಿಗೆ ಶರಣಾಗಿದ್ದಾರೆ. ಪತ್ನಿಯ ಬಳಿ ಇವರು 20,000 ಹಣವನ್ನು ಕೇಳಿದ್ದು ಪತ್ನಿ ಕೊಡಲು ನಿರಾಕರಿಸಿದ್ದ ಕಾರಣ ಈ ರೀತಿ ಮಾಡಿಕೊಂಡಿದ್ದಾರೆ ಎಂದು ವರದಿಗಳು ಬಂದಿದ್ದು, ಪ್ರತಿದಿನವೂ ಶಾಲೆಗೆ ಇಸ್ಕಾನ್ ದೇವಸ್ಥಾನದಿಂದ ಊಟ ಬರುತ್ತಿದ್ದು, ಈ ಊಟವನ್ನು ಪಕ್ಕದ ಕಟ್ಟಡಕ್ಕೆ ಇಡಲು ವಿದ್ಯಾರ್ಥಿಗಳು ಹೋದಾಗ ನೇಣಿಗೆ ಶರಣಾದ ವ್ಯಕ್ತಿಯನ್ನು ನೋಡಿ ಆತಂಕಗೊಂಡು ಶಿಕ್ಷಕರಿಗೆ ಮಾಹಿತಿ ನೀಡಿದ್ದಾರೆ.
ಇನ್ನು ಘಟನಾ ಸ್ಥಳಕ್ಕೆ ಅಮೃತ ಹಳ್ಳಿಯ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ.
Comments are closed.