Bengaluru: ಮಂಚನಬೆಲೆ ಡ್ಯಾಮ್ ನಲ್ಲಿ ಸ್ನೇಹಿತರೊಂದಿಗೆ ಈಜಲು ಹೋದ ವಿದ್ಯಾರ್ಥಿ ಸಾವು

Bengaluru: ಸ್ನೇಹಿತರೊಂದಿಗೆ ಈಜಲು ಹೋದ ಡಿಪ್ಲೋಮೋ ವಿದ್ಯಾರ್ಥಿ ಮಂಚನಬೆಲೆ ಡ್ಯಾಮ್ ನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬುಧವಾರ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಮುರುಗೇಶಪಾಳ್ಯದ ನಿವಾಸಿ, ಅಂತಿಮ ವರ್ಷದ ಡಿಪ್ಲೊಮಾ ವಿದ್ಯಾರ್ಥಿ ವಿಕಾಸ್ (19) ಎಂದು ಗುರುತಿಸಲಾಗಿದ್ದು, ಬುಧವಾರ ಮಧ್ಯಾಹ್ನ 12.30 ರ ಸುಮಾರಿಗೆ ಮೃತ ವಿದ್ಯಾರ್ಥಿ ವಿಕಾಸ್, ತನ್ನ ಸ್ನೇಹಿತರಾದ ಸೃಜನ್ ಮತ್ತು ಲೋಕೇಶ್ ಗೌಡ ಜೊತೆ ಈಜಲು ಡ್ಯಾಮ್ ಗೆ ಹೋಗಿದ್ದರು.
ನೀರಿನಲ್ಲಿ ಕೆಲವೇ ನಿಮಿಷಗಳಲ್ಲಿ ವಿಕಾಸ್ ಆಳಕ್ಕೆ ಸಿಲುಕಿ ಮುಳುಗಲು ಆರಂಭಿಸಿದ್ದಾನೆ. ಕೂಡಲೇ ಸ್ನೇಹಿತರು ಪೊಲೀಸರು ಹಾಗೂ ಅಗ್ನಿಶಾಮಕ ದಳ ಮತ್ತು ತುರ್ತು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಜಿದ್ದಾರೆ. ಬಳಿಕ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ.
ಸುಮಾರು 6 ಗಂಟೆಗಳ ಕಾಲ ಶೋಧ ಕಾರ್ಯದ ನಂತರ ಮೃತ ದೇಹ ಸಿಕ್ಕಿದ್ದು, ದೇಹವನ್ನು ಮರಣೋತ್ತರ ಪರೀಕ್ಷೆಗೆ ಇದೀಗ ಕಳುಹಿಸಲಾಗಿದ್ದು, ಅಸ್ವಾಭಾವಿಕ ಮರಣ ವರದಿ ಪ್ರಕರಣವನ್ನ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
Comments are closed.