Death: ಕೆರೆಗೆ ಬಿದ್ದು ಅವಳಿ ಮಕ್ಕಳ ದಾರುಣ ಸಾವು!

Death: ಮನೆಯ ಎದುರು ಆಟವಾಡುತ್ತಾ ಕೆರೆಗೆ ಬಿದ್ದು ಮೂರೂ ವರ್ಷದ ಅವಳಿ ಮಕ್ಕಳು ಜೀವ ಕಳೆದುಕೊಂಡ ಘಟನೆ ತಾಲೂಕಿನ ಯರಿನಾರಾಯಣಪೂರ ಗ್ರಾಮದಲ್ಲಿ ನಡೆದಿದೆ.

ಯರಿನಾರಾಯಣಪೂರ ಗ್ರಾಮದ ಶರೀಫಸಾಬ ಚಂದುಖಾನ ಅವರ ಅವಳಿ ಮಕ್ಕಳಾದ ಮುಜಮ್ಮಿಲ್(03) ಹಾಗೂ ಮುದಸ್ಟಿರ(03) ಮೃತಪಟ್ಟ (death ) ಕಂದಮ್ಮಗಳು.
ತಂದೆ ಶರೀಫಸಾಬ ಅವರು ಅನಾರೋಗ್ಯದಿಂದ ಬಳುತ್ತಿದ್ದರೆ. ತಾಯಿ ಕೆಲಸಕ್ಕೆ ಹುಬ್ಬಳ್ಳಿಗೆ ಹೋದ ಸಮಯದಲ್ಲಿ ಮನೆಯಲ್ಲಿ ಅಜ್ಜಿ ಮಾತ್ರ ಇದ್ದು ಈ ಸಮಯದಲ್ಲಿ ಅಜ್ಜಿ ಮನೆಯ ಕೆಲಸ ಮಾಡುತ್ತಿದ್ದ ವೇಳೆ ಮಕ್ಕಳು ಆಟವಾಡುತ್ತಾ ಮನೆಯ ಪಕ್ಕದಲ್ಲಿದ್ದ ಕೆರೆಗೆ ಆಯತಪ್ಪಿ ಬಿದ್ದಿದ್ದಾರೆ. ಮನೆಯಲ್ಲಿ ಮಕ್ಕಳು ಕಾಣದೇ ಇದ್ದಾಗ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ:Puttur: ಶಿಕ್ಷಕಿ ನ್ಯಾನ್ಸಿ ನೆಲ್ಯಾಡಿಯವರಿಗೆ “ಅಂತರ್ ರಾಜ್ಯ ಸಾಹಿತ್ಯ ರತ್ನ” ಪ್ರಶಸ್ತಿ ಪುರಸ್ಕಾರ!
Comments are closed.