Dasara: 400 ವರ್ಷಗಳಲ್ಲೇ ಮೊದಲ ಸಲ: 11 ದಿನಗಳ ಕಾಲ ನಡೆಯಲಿದೆ ಮೈಸೂರು ದಸರಾ
ವಿಶೇಷತೆಯೇನು?

Dasara: ಮೈಸೂರು ದಸರಾ ಈ ಬಾರಿ 11 ದಿನ ನಡೆಯಲಿದೆ ಎಂದು ಧಾರ್ಮಿಕ ಚಿಂತಕ ಡಾ.ಶೆಲ್ವಪಿಳ್ಳೆ ಅಯ್ಯಂಗಾರ್ ಹೇಳಿದ್ದಾರೆ. ಪ್ರತಿ ವರ್ಷ 9 ದಿನ ನವರಾತ್ರಿ 10ನೇ ದಿನ ವಿಜಯದಶಮಿ ಆಚರಣೆ ಮಾಡುವುದು ವಾಡಿಕೆಯಾಗಿದ್ದು, 400 ವರ್ಷಗಳಲ್ಲೇ ಮೊದಲ ಬಾರಿಗೆ ಪಂಚಮಿ ತಿಥಿ ಎರಡು ದಿನ ಬಂದಿದ್ದರಿಂದ ಈ ಬಾರಿ 11ನೇ ದಿನಕ್ಕೆ ವಿಜಯದಶಮಿ ಆಚರಣೆ ನಡೆಯಲಿದೆ. ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ ಮೈಸೂರು ದಸರಾ ಜರುಗಲಿದೆ. ಒಂದು ದಿನ ಅಧಿಕ ಆರಾಧನೆಯಿಂದ ಎಲ್ಲವೂ ಒಳಿತಾಗಲಿದೆ” ಎಂದು ಶೆಲ್ವಪಿಳ್ಳೆ ಹೇಳಿದರು.

Comments are closed.