suicide: ಕೊಡಗಿನ ಯುವಕ ಬೆಂಗಳೂರಿನಲ್ಲಿ ಆತ್ಮಹತ್ಯೆ!

Share the Article

suicide: ಸುಂಟಿಕೊಪ್ಪ ಸಮೀಪದ ಕಂಬಿಬಾಣೆ ಕಾಲೋನಿ ನಿವಾಸಿ ಸುರೇಶ್ ಹಾಗೂ 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಸದಸ್ಯೆ ಚಂದ್ರಾವತಿರವರ ಪುತ್ರ ಗಗನ್ (21) ಎಂಬುವವರು ನೆನ್ನೆ ರಾತ್ರಿ ಬೆಂಗಳೂರಿನಲ್ಲಿ ತಾನು ವಾಸವಿದ್ದ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ (suicide) ಮಾಡಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ ಗಗನ್ ರೀಲ್ಸ್ ಕೂಡ ಮಾಡುತ್ತಿದ್ದರು. ಕಳೆದ ಎರಡು ದಿವಸಗಳಿಂದ ತಾಯಿಗೆ ಕರೆ ಮಾಡಿ ಬನ್ನಿ ಎಂದು ಪದೇ ಪದೇ ಕರೆದಿದ್ದ ಎನ್ನಲಾಗಿದೆ. ಹೀಗಾಗಿ ಚಂದ್ರಾವತಿರವರು ನೆನ್ನೆ ರಾತ್ರಿ ಬೆಂಗಳೂರಿಗೆ ಬಸ್ಸಿನಲ್ಲಿ ಪ್ರಯಾಣಿಸಿದ್ದರು. ತಾನು ಬರುತ್ತಿರುವ ವಿಷಯವನ್ನು ಕೂಡ ಆತನಿಗೆ ತಿಳಿಸಿದ್ದರು. ಆದರೆ ಚಂದ್ರಾವತಿರವರು ಬೆಂಗಳೂರು ತಲುಪುವ ಮೊದಲೇ ಪ್ರೀತಿಯ ಪುತ್ರ ಗಗನ್ ನೇಣು ಬಿಗಿದು ಇಹಲೋಕ ತ್ಯಜಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

Comments are closed.