E-Khata: ಜುಲೈ 1 ರಿಂದ ಮನೆ ಮನೆಗೆ ಇ-ಖಾತ

Share the Article

E-Khata: ರಾಜ್ಯ ಸರ್ಕಾರ ಮೊದಲೇ ಭರವಸೆ ನೀಡಿದಂತ ಆಸ್ತಿ ಮಾಲೀಕರಿಗೆ ಮನೆ ಬಾಗಿಲಿಗೆ ಈ ಖಾತೆಗಳನ್ನು ತಲುಪಿಸಲಿದೆ ಎಂದು ಉಪಮುಖ್ಯಮಂತ್ರಿ ಮತ್ತು ಬೆಂಗಳೂರಿನ ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಬುಧವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇ-ಖಾತಾ ವಿತರಣೆ ಕುರಿತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಪ್ರಕ್ರಿಯೆ ಆರಂಭವಾಗಿದ್ದು, ಜುಲೈ 1 ರಿಂದ 25,000 ಇ-ಖಾತಾಗಳನ್ನು ಜನರ ಮನೆ ಬಾಗಿಲಿಗೇ ತಲುಪಿಸಲಾಗುವುದು ಎಂದು ಹೇಳಿದರು.

 

ನಗರದಲ್ಲಿ ಆಸ್ತಿಗಳ ಇ – ಖಾತಾ ದಾಖಲೆ ವಿತರಣೆ ಆಂದೋಲನ ನಡೆಸಲಾಗುವುದು. ‘ಬೆಂಗಳೂರಿನಲ್ಲಿ 25 ಲಕ್ಷ ಆಸ್ತಿಗಳಿದ್ದು, ಈ ಪೈಕಿ 5 ಲಕ್ಷ ಆಸ್ತಿಗಳ ಮಾಲೀಕರಷ್ಟೇ ಅಂತಿಮ ಇ-ಖಾತಾಗೆ ಅರ್ಜಿ ಸಲ್ಲಿಸಿದ್ದಾರೆ. ಆಸ್ತಿ ಮಾಲೀಕರು ಜಾಗೃತರಾಗಿ ದಾಖಲೆಗಳನ್ನು ಒದಗಿಸಿ ಇ-ಖಾತಾ ಪಡೆದುಕೊಳ್ಳಬೇಕು. ಒಂದು ತಿಂಗಳ ಕಾಲ ಇ-ಖಾತಾ ವಿತರಣೆ ಆಂದೋಲನ ಹಮ್ಮಿಕೊಳ್ಳಲಾಗುವುದು. ಈ ಕುರಿತು ಮನೆ ಮನೆ ಪ್ರಚಾರ ಹಾಗೂ ಜಾಹೀರಾತಿನ ಮೂಲಕ ಪ್ರಚಾರ ಮಾಡಲಾಗುವುದು ಎಂದು ತಿಳಿಸಿದರು.

 

Comments are closed.