Udupi: ಉಡುಪಿ: ಸ್ಕೂಲ್ ಬಸ್ ಗೆ ಲಾರಿ ಢಿಕ್ಕಿ!

Share the Article

Udupi: ಶಾಲಾ ಬಸ್ಸೊಂದಕ್ಕೆ ಹಿಂಬದಿಯಿಂದ ಬಂದ ಈಚಾರ್ ಲಾರಿಯೊಂದು ಗುದ್ದಿದ ಪರಿಣಾಮ ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗೊಂಡ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಜಿ.ಎಂ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿದ್ದ ವಾಹನಕ್ಕೆ ಕುಂದಾಪುರದಿಂದ ಬಂದಿದ್ದ ಈಚಾರ್ ಲಾರಿಯೊಂದು ಧರ್ಮವರ ಆಡಿಟೋರಿಯಂ ಸರ್ಕಲ್ ಬಳಿ ಯೂಟರ್ನ್ ಮಾಡುವ ಸಂದರ್ಭ ಗುದ್ದಿದೆ.

ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದೆ.‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Comments are closed.