E-ADHAAR: ಇ-ಆಧಾ‌ರ್ ಆ್ಯಪ್ ಬಿಡುಗಡೆಗೆ ಮುಂದಾದ UIDAI – ಮೊಬೈಲ್‌ನಲ್ಲೇ ಎಲ್ಲ ರೀತಿಯ ಬದಲಾವಣೆಗಳೂ ಸಾಧ್ಯ

Share the Article

E-ADHAAR: ಭಾರತದ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ (UIDAI) ಶೀಘ್ರದಲ್ಲೇ ಹೊಸ ಮೊಬೈಲ್ ಆ್ಯಪ್ ಪ್ರಾರಂಭಿಸಲಿದ್ದು, ಇದನ್ನು ‘ಇ-ಆಧಾ‌ರ್’ ಎಂದು ಕರೆಯಲಾಗುತ್ತದೆ. ಇದರ ಮೂಲಕ, ಆಧಾ‌ರ್ ಕಾರ್ಡ್ ಹೊಂದಿರುವವರು ತಮ್ಮ ಹೆಸರು, ವಿಳಾಸ, ಜನ್ಮ ದಿನಾಂಕ ಮತ್ತು ಮೊಬೈಲ್ ಸಂಖ್ಯೆಯನ್ನು ಮನೆಯಿಂದಲೇ ಅಪ್ಲೇಟ್ ಮಾಡಲು ಸಾಧ್ಯವಾಗುತ್ತದೆ.

ಮಾಧ್ಯಮ ವರದಿಯ ಪ್ರಕಾರ, ನವೆಂಬರ್ 2025 ರಿಂದ, ಆಧಾರ್ ಕಾರ್ಡ್ ಅನ್ನು ನವೀಕರಿಸಲು ಆಧಾರ್ ಕೇಂದ್ರಕ್ಕೆ ಹೋಗುವ ಅಗತ್ಯವು ಕೊನೆಗೊಳ್ಳುತ್ತದೆ. ಈ ಬದಲಾವಣೆಯು ಜನರಿಗೆ ತುಂಬಾ ಅನುಕೂಲಕರವಾಗಿರುತ್ತದೆ. ಇದರಿಂದ ಜನತೆ ಈಗ ಮನೆಯಲ್ಲಿಯೇ ಕುಳಿತು ತಮ್ಮ ಆಧಾರ್ ಕಾರ್ಡ್‌ನ ವಿವರಗಳನ್ನು ನವೀಕರಿಸಲು ಸಾಧ್ಯವಾಗುತ್ತದೆ. “ಸುಮಾರು 1 ಲಕ್ಷ ಆಧಾರ್ ನವೀಕರಣ ಯಂತ್ರಗಳಲ್ಲಿ, 2,000 ಯಂತ್ರಗಳನ್ನು ಹೊಸ ವ್ಯವಸ್ಥೆಗೆ ಲಿಂಕ್ ಮಾಡಲಾಗಿದೆ” ಎಂದು ಸಿಇಒ ಭುವನೇಶ್ ಕುಮಾರ್ ಹೇಳಿದರು.

ಒಬ್ಬ ವ್ಯಕ್ತಿಯು ತನ್ನ ಆಧಾರ್ ಕಾರ್ಡ್ ಅನ್ನು ಈಗ ನವೀಕರಿಸಲು ಬಯಸಿದರೆ, ಅವರು ಆಧಾರ್ ಕೇಂದ್ರಕ್ಕೆ ಹೋಗಬೇಕಾಗುತ್ತದೆ. ಹೆಸರು, ವಿಳಾಸ, ಜನ್ಮ ದಿನಾಂಕ ಅಥವಾ ಮೊಬೈಲ್ ಸಂಖ್ಯೆಯಲ್ಲಿ ಬದಲಾವಣೆ, ಯಾವುದೇ ಆಗಿದ್ದರೂ, ಪ್ರತಿ ನವೀಕರಣಕ್ಕೂ ಖುದ್ದು ನಾವೇ ಸೈಬರ್‌ ಕೇಂದ್ರಗಳಿಗೆ ಭೇಟಿ ನೀಡುವ ಅಗತ್ಯವಿತ್ತು. ಆದರೆ ಈಗ ಅದರ ಅಗತ್ಯ ಇಲ್ಲ.

Comments are closed.