Dharmasthala: ಯೋಗರತ್ನ ಪ್ರಶಸ್ತಿಗೆ ಚಿನ್ಮಯಿ ಎ. ಬೆಂಗಳೂರು ಆಯ್ಕೆ!

Dharmasthala: ಶ್ರೀ ಧರ್ಮಸ್ಥಳ (Dharmasthala) ಮಂಜುನಾಥೇಶ್ವರ ಯೋಗ ಮತ್ತು ನೈತಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್, ಧರ್ಮಸ್ಥಳದಿಂದ ಯೋಗ ರತ್ನ ಪ್ರಶಸ್ತಿಗೆ, ಅಂತರಾಷ್ಟ್ರೀಯ ಯೋಗಾಸನ ವಿಜೇತೆಯಾಗಿದ್ದು ದೇಶ ವಿದೇಶಗಳಲ್ಲಿ ಯೋಗ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಚಿನ್ಮಯಿ ಎ. ಬೆಂಗಳೂರು ಅವರನ್ನು ಆಯ್ಕೆ ಮಾಡಲಾಗಿದೆ.

ಚಿನ್ಮಯಿ ಎ. ಇವರಿಗೆ ಜೂ.21ರಂದು 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ, “ಪಯಣ” ಕಾರ್ ಮ್ಯೂಸಿಯಮ್ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೆ, ಬ್ರಹ್ಮಪುರ, ಶ್ರೀರಂಗಪಟ್ಟಣದಲ್ಲಿ ಶಾಂತಿವನ ಟ್ರಸ್ಟ್ ಅಧ್ಯಕ್ಷ ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ನಡೆಯಲಿದ್ದು, ಗಣ್ಯರ ಉಪಸ್ಥಿತಿಯಲ್ಲಿ ಗೌರವ ಪುರಸ್ಕಾರ ನಡೆಯಲಿದೆ.
Comments are closed.