Tamil Actor Arya: ತಮಿಳು ನಟನ ಮೇಲೆ ತೆರಿಗೆ ವಂಚನೆ ಆರೋಪ: ಇಲಾಖೆ ದಾಳಿ

Tamil Actor Arya: ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ನಟ ಆರ್ಯ ವಿರುದ್ಧ ತೆರಿಗೆ ಕದ್ದ ಆರೋಪ ಕೇಳಿ ಬಂದಿದ್ದು, ಈ ಕಾರಣಕ್ಕೆ ಜೂ.18 ರಂದು ಆರ್ಯ ಅವರ ಮಾಲೀಕತ್ವದ ಹೋಟೆಲ್ ಚೈನ್ಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ʼಸೀ ಶೆಲ್ʼ ಹೆಸರಿನ ಹೋಟೆಲ್ ರೆಸ್ಟೋರೆಂಟ್ ಚೈನ್ ಅನ್ನು ಸಹ ಹೊಂದಿದ್ದು, ಈ ಹೋಟೆಲ್ ಚೈನ್ನಿಂದ ದೊಡ್ಡ ಮೊತ್ತದ ಆದಾಯವನ್ನು ನಟ ಆರ್ಯ ಪಡೆಯುತ್ತಿದ್ದಾರೆ. ಆದರೆ ಇದರ ಆದಾಯವನ್ನು ಸರಕಾರಿಂದ ಮುಚ್ಚಿಟ್ಟಿದ್ದಾರೆ ಎನ್ನುವ ಆರೋಪದಲ್ಲಿ ಆರ್ಯ ಅವರಿಗೆ ಸೇರಿದ ಸೀ ಶೆಲ್ ರೆಸ್ಟೋರೆಂಟ್ನ ಹಲವು ಬ್ರ್ಯಾಂಚ್ಗಳ ಮೇಲೆ ಏಕಕಾಲಕ್ಕೆ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಆರ್ಯ ತಮಿಳು ನಟನಾಗಿರುವ ಜೊತೆಗೆ ನಿರ್ಮಾಪಕ, ಉದ್ಯಮಿ ಕೂಡಾ ಹೌದು. ತಮಿಳು, ಮಲಯಾಳಂನ 11 ಸಿನಿಮಾಗಳನ್ನು ಅವರು ನಿರ್ಮಾಣ ಮಾಡಿದ್ದಾರೆ. ಜೊತೆಗೆ ಎರಡು ವೆಬ್ ಸರಣಿ, ಟಿವಿ ಶೋ ಕೂಡಾ ನಿರ್ಮಾಣ ಮಾಡಿದ್ದಾರೆ. ಇವುಗಳ ಜೊತೆಗೆ ಹಲವು ಸಿನಿಮಾಗಳಲ್ಲಿ ನಟನೆ ಕೂಡಾ ಮಾಡುತ್ತಿದ್ದಾರೆ.
Comments are closed.