Mangaluru: ಜಪ್ಪಿನಮೊಗರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಕಾರು ಅಪ್ಪಚ್ಚಿ, ಇಬ್ಬರು ಸಾವು

Mangaluru: ಜಪ್ಪಿನಮೊಗರು ಹೆದ್ದಾರಿಯಲ್ಲಿ ಸ್ಕೋಡಾ ಕಾರೊಂದು ಕಿರು ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಅಪಘಾತದ ತೀವ್ರತೆಗೆ ಇಬ್ಬರು ಯುವಕರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.

ಕಾರು ಚಾಲಕ, ಮಂಗಳೂರಿನ ಕದ್ರಿ ನಿವಾಸಿ ಅಮನ್ ರಾವ್ (22), ಚಾಲಕನ ಹಿಂಬದಿ ಕುಳಿತಿದ್ದ ದೇರೆಬೈಲ್ ನಿವಾಸಿ, ಎನ್‌ಎಸ್‌ಯುಐ ಜಿಲ್ಲಾ ಉಪಾಧ್ಯಕ್ಷ ಓಂಶ್ರೀ ಪೂಜಾರಿ (24) ಮೃತ ಹೊಂದಿದ್ದಾರೆ.
ರಾ.ಹೆ. 66 ರ ಜಪ್ಪಿನಮೊಗರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯ ಎದುರಲ್ಲಿ ತಡರಾತ್ರಿ ಈ ಅಪಘಾತ 2.30 ರ ವೇಳೆ ನಡೆದಿದೆ. ಐವರು ಯುವಕರಿದ್ದ ಫೋಕ್ಸ್ ವೇಗನ್ ವರ್ಟಸ್ ಕಾರು ತಲಪಾಡಿಯಿಂದ ಮಂಗಳೂರಿನ ಕಡೆಗೆ ಅತಿ ವೇಗದಿಂದ ಧಾವಿಸುತ್ತಿದ್ದು, ಕಾರು ಸಂಪೂರ್ಣ ಪುಡಿಯಾಗಿದ್ದು, ಇಂಜಿನ್ ಭಾಗವೇ ಹೊರಕ್ಕೆ ಬಂದಿದ್ದು, ಏರ್‌ಬ್ಯಾಗ್ ಚಿಂದಿಯಾಗಿದೆ.
ರಾತ್ರಿ ಕಂಕನಾಡಿಯಲ್ಲಿ ಪಾರ್ಟಿ ಮುಗಿಸಿ ತಲಪಾಡಿಯಲ್ಲಿ ಊಟ ತಿಂದು ಮುಗಿಸಿ ಹಿಂತಿರುಗುತ್ತಿದ್ದರು. ಜೊತೆಗಿದ್ದ ವಂಶಿ ಮತ್ತು ಆಶಿಕ್ ಗಂಭೀರ ಗಾಯಗೊಂಡಿದ್ದು, ಇಬ್ಬರು ತೀವ್ರ ನಿಗಾಘಟಕದಲ್ಲಿದ್ದಾರೆ. ಇವರ ಜೊತೆ ಇನ್ನೋರ್ವ ಇಟಲಿ ಮೂಲದ ಪ್ರವಾಸಿಗ ಜೆರ್ರಿ ಎಂಬುವವನಿದ್ದು, ಆತ ಅಪಾಯದಿಂದ ಪಾರಾಗಿದ್ದಾನೆ.
Comments are closed.