Home News ಬಂತು ಟ್ರಂಪ್‌ ಹೊಸ ಫೋನ್‌– ಮೊಬೈಲ್‌ ಉದ್ಯಮಕ್ಕೆ ಟ್ರಂಪ್‌, ಬೆಲೆ ಎಷ್ಟು? 

ಬಂತು ಟ್ರಂಪ್‌ ಹೊಸ ಫೋನ್‌– ಮೊಬೈಲ್‌ ಉದ್ಯಮಕ್ಕೆ ಟ್ರಂಪ್‌, ಬೆಲೆ ಎಷ್ಟು? 

Hindu neighbor gifts plot of land

Hindu neighbour gifts land to Muslim journalist

Washington: ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಈಗ ಮೊಬೈಲ್‌ ಫೋನ್‌ ಮತ್ತು ವಯರ್‌ಲೆಸ್‌ ಸೇವಾ ಉದ್ಯಮದ ಮಾಲೀಕ. ಟ್ರಂಪ್‌ ಈಗ Trump Mobile T1 Phone ಹೆಸರಿನಲ್ಲಿ ಆಂಡ್ರಾಯ್ಡ್‌ ಫೋನ್‌ ಮಾರುಕಟ್ಟೆ ಬಿಡುಗಡೆ ಮಾಡಿದ್ದಾರೆ.

ಥೇಟ್ ಡೋನಾಲ್ಡ್ ಟ್ರಂಪ್ ರ ಮೈ ಬಣ್ಣಕ್ಕೆ ಹೋಲುವ ಚಿನ್ನದ ಬಣ್ಣದ ಫೋನ್‌ ಇದಾಗಿದ್ದು ದರವನ್ನು ಕೂಡಾ ಈಗಾಗಲೇ ನಿಗದಿ ಮಾಡಲಾಗಿದೆ. ಈ ಫೋನು ಭಾರತದ ಗ್ರಾಹಕರ ಕೈಗೆಟುಕುವ ದರದಲ್ಲಿದೆ. 499 ಡಾಲರ್‌ (ಅಂದಾಜು 43,000 ರೂ.) ನ ಈ ಫೋನನ್ನು ಅಮೆರಿಕದಲ್ಲೇ ಉತ್ಪಾದನೆ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ. The Trump Organization ನಲ್ಲಿ ಡೊನಾಲ್ಡ್‌ ಟ್ರಂಪ್‌ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿದ್ದಾರೆ.

ಇದೀಗ T1 ಮೊಬೈಲ್ ಸೇವೆಯು ʼ47 ಪ್ಲಾನ್ʼ ಹೆಸರಿನ ಸೇವೆಯನ್ನು ನೀಡುತ್ತಿದೆ. ಟ್ರಂಪ್‌ ರವರು ಅಮೆರಿಕದ 47ನೇ ಅಧ್ಯಕ್ಷರಾದ ಕಾರಣಕ್ಕೆ ಈ ಸೇವೆಗೆ 47 ಪ್ಲಾನ್‌ ಎಂಬ ಹೆಸರನ್ನು ಇಡಲಾಗಿದೆ. ಟ್ರಂಪ್ ಮೊಬೈಲ್ ಅಮೆರಿಕದ ಟೆಲಿಕಾಂ ದೈತ್ಯ ಕಂಪನಿಗಳಾದ Verizon, AT&T ಮತ್ತು T-Mobile ನಿಯಂತ್ರಣ ಇರುವ ನೆಟ್‌ವರ್ಕ್‌ಗಳ ಮೂಲಕ ಸೇವೆ ಒದಗಿಸುತ್ತದೆ. 5G ಸೇವೆಗೆ ಮಾಸಿಕ 47.45 ಡಾಲರ್‌ (4,097 ರೂ.) ದರವನ್ನು ನಿಗದಿ ಮಾಡಲಾಗಿದೆ.

ಟ್ರಂಪ್ ಫೋನಿನ ವೈಶಿಷ್ಟ್ಯಗಳೇನು?

6.78 ಇಂಚಿನ AMOLED ಸ್ಕ್ರೀನ್‌, 1080 x 2460 ಪಿಕ್ಸೆಲ್‌, ನ್ಯಾನೋ ಸಿಮ್‌ + ಇ ಸಿಮ್‌ ಅನ್ನು ಕೂಡಾ ಇದಕ್ಕೆ ಹಾಕಬಹುದಾಗಿದ್ದು ಅಕ್ಟಾಕೋರ್‌ ಪ್ರೊಸೆಸರ್‌ನೊಂದಿಗೆ ಇದು ಬಂದಿದೆ. ಜತೆಗೆ ಆಂಡ್ರಾಯ್ಡ್‌ 15 ಆಪರೇಟಿಂಗ್‌ ಸಿಸ್ಟಂ, 12GB RAM, 256GB ಆಂತರಿಕ ಮೆಮೊರಿ ಹೊಂದಿದ್ದು ಕಾರ್ಡ್‌ ಮೂಲಕ ಹೆಚ್ಚುವರಿ ಮೆಮೊರಿ ವಿಸ್ತರಿಸಬಲ್ಲ ಅವಕಾಶವಿದೆ.

50 ಎಂಪಿ (ವೈಡ್‌), 2 ಎಂಪಿ(ಮ್ಯಾಕ್ರೋ), 2 ಎಂಪಿ(ಡೆಪ್ತ್)‌ ಕ್ಯಾಮೆರಾವನ್ನು ಹಿಂದುಗಡೆ ಕೊಟ್ಟರೆ, ಮುಂದುಗಡೆ 16 ಎಂಪಿ ಕ್ಯಾಮೆರಾವನ್ನು ಹೊಂದಿದೆ. 5000 mAh ಬ್ಯಾಟರಿ ಪವರಿನೊಂದಿಗೆ ಟ್ರಂಪ್ ಫೋನ್ ಅಮೇರಿಕಾದಲ್ಲಿ ರಿಂಗ್ ಆಗಲು ಶುರುವಾಗಿದೆ.