KEA ಪರೀಕ್ಷೆಗಳಿಗೆ ಏಕರೂಪದ ವಸ್ತ್ರ ಸಂಹಿತೆ ಪ್ರಕಟ – ಮಹಿಳೆಯರಿಗೆ ಮಂಗಳಸೂತ್ರ, ಕಾಲುಂಗುರ ಧರಿಸಲು ಅನುಮತಿ!!

Share the Article

KEA: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು(KEA) ರಾಜ್ಯದ ಪರೀಕ್ಷಾರ್ಥಿಗಳಿಗೆ ಸಿಹಿಸುದ್ದಿಯೊಂದನ್ನು ನೀಡಿದೆ. ತಾನು ನಡೆಸುವ ಪರೀಕ್ಷೆಗಳ ಸಮಯದಲ್ಲಿ ವಸ್ತ್ರಸಂಹಿತೆ ವಿಚಾರದಲ್ಲಿ ಗೊಂದಲ ಉಂಟಾಗದಂತೆ ನೋಡಿಕೊಳ್ಳಲು ಏಕರೂಪ ವಸ್ತ್ರಸಂಹಿತೆ ಸಿದ್ದಪಡಿಸಿದ್ದು, ಪರೀಕ್ಷೆಗಳಲ್ಲಿ ಮಂಗಳಸೂತ್ರ, ಕಾಲುಂಗುರ ಧರಿಸಲು ಅನುಮತಿ ನೀಡಿದೆ.

 

ಹೌದು, ಹೌದು, ರಾಜ್ಯದಲ್ಲಿ ಸಿಇಟಿ ಸೇರಿದಂತೆ ಕೆಇಎ ನಡೆಸುವ ಎಲ್ಲಾ ಸ್ಪರ್ಧಾತ್ಮಕ ಮತ್ತು ನೇಮಕಾತಿ ಪರೀಕ್ಷೆಗಳಲ್ಲಿ ಮಂಗಳಸೂತ್ರ, ಕಾಲುಂಗುರ ಧರಿಸಲು ಅನುಮತಿ ನೀಡಿದೆ. ಅಲ್ಲದೆ ಮಾಂಗಲ್ಯ, ಕಾಲುಂಗುರ ಹೊರತುಪಡಿಸಿ ಯಾವುದೇ ಲೋಹದ ಆಭರಣಗಳನ್ನು ಧರಿಸುವಂತಿಲ್ಲ. ವಿಸ್ತಾರವಾದ ಕಸೂತಿ, ಹೂಗಳು, ಬ್ರೂಚ್‌ಗಳು ಅಥವಾ ಬಟನ್‌ಗಳು ಹೊಂದಿರುವ ಬಟ್ಟೆಗಳನ್ನು ಧರಿಸುವಂತಿಲ್ಲ. ಪೂರ್ಣ ತೋಳಿನ ಬಟ್ಟೆಗಳು/ಜೀನ್ಸ್ ಪ್ಯಾಂಟ್‌ಗಳನ್ನು ಧರಿಸುವುದನ್ನು ನಿಷೇಧಿಸಿದೆ.

 

ಅಲ್ಲದೆ ಪುರುಷರಿಗೆ ಅರ್ಧ ತೋಳಿನ ಶರ್ಟ್, ಕಾಲರ್ ಇಲ್ಲದ ಶರ್ಟ್‌ಗಳನ್ನು ಧರಿಸಬೇಕು. ಕುರ್ತಾ, ಜೀನ್ಸ್ ಪ್ಯಾಂಟ್‌ಗೆ ಅವಕಾಶವಿಲ್ಲ ಎಂದು ತಿಳಿಸಿದೆ. ಅಭ್ಯರ್ಥಿ ಧರಿಸುವ ಬಟ್ಟೆಗಳು ಜಿಪ್ ಜೇಬುಗಳು, ದೊಡ್ಡ ಬಟನ್‌ಗಳು, ವಿಸ್ತಾರವಾದ ಕಸೂತಿ ಇರಬಾರದು. ಪರೀಕ್ಷಾ ಹಾಲ್‌ಗೆ ಚಪ್ಪಲಿಗೆ ಮಾತ್ರ ಅವಕಾಶವಿದ್ದು, ಶೂ ಸಂಪೂರ್ಣ ನಿಷೇಧಿಸಲಾಗಿದೆ. ಅಭ್ಯರ್ಥಿಗಳು ಕುತ್ತಿಗೆಯ ಸುತ್ತಲೂ ಯಾವುದೇ ಲೋಹದ ಆಭರಣ, ಕಿವಿ ಓಲೆ, ಉಂಗುರ, ಕಡಗಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ. ತೆಳುವಾದ ಚಪ್ಪಲಿಗಳನ್ನು ಧರಿಸಬೇಕು ಎಂದು ಕೂಡ ಹೇಳಿದೆ ಎಂದು ಹೇಳಿದೆ.

Comments are closed.