Puttur: ಪುತ್ತೂರು: ಕಾಂಗ್ರೆಸ್ ಹಿರಿಯ ಕಾರ್ಯಕರ್ತ ಸುರೇಶ್ ಸಾಲಿಯಾನ್ ನಿಧನ!

Puttur: ಸಾಮೆತ್ತಡ್ಕ ನಿವಾಸಿ, ಕಾಂಗ್ರೆಸ್ ಹಿರಿಯ ಕಾರ್ಯಕರ್ತ ಸುರೇಶ್ ಸಾಲಿಯಾನ್ (65) ರವರು ಅಲ್ಪಕಾಲದ ಅನಾರೋಗ್ಯದಿಂದ ಜೂ.17 ರಂದು ನಿಧನ ಹೊಂದಿದರು.

ಮೃತ ಸುರೇಶ್ ರವರು ಪುತ್ತೂರು (Puttur) ದರ್ಬೆಯಲ್ಲಿ ಬಜಾಜ್ ಗ್ಯಾರೇಜ್ ನಲ್ಲಿ ಸೇವೆ ನೀಡುತ್ತಿದ್ದು ಬಳಿಕ ಸಾಮೆತ್ತಡ್ಕ ದ್ವಿತೀಯ ಕ್ರಾಸ್ ನಲ್ಲಿ ಪಡಿತರ ಅಂಗಡಿಯನ್ನು ನಡೆಸುತ್ತಿದ್ದರು.
ಸಾಮೆತ್ತಡ್ಕ ಕಾಂಗ್ರೆಸ್ ಬೂತ್ ಸಮಿತಿಯ ಸಕ್ರಿಯ ಸದಸ್ಯರಾಗಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿಯಾಗಿ ಸೇವೆಸಲ್ಲಿಸುತ್ತಿದ್ದರು ಜೊತೆಗೆ ದ.ಕ ಗ್ಯಾರೇಜು ಮಾಲಕರ ಸಂಘದ ಪುತ್ತೂರು ತಾಲೂಕಿನ ಗೌರವಾಧ್ಯಕ್ಷರಾಗಿ ಸೇವೆಯನ್ನು ನೀಡುತ್ತಿದ್ದರು.
Comments are closed.