Shaving Tips: ಪುರುಷರೇ ನೀವು ತಿಂಗಳಿಗೆ ಎಷ್ಟು ಬಾರಿ ‘ಗಡ್ಡ ಶೇವ್’ ಮಾಡಬೇಕು ಗೊತ್ತಾ?

Share the Article

Shaving Tips: ಮೊದಲೆಲ್ಲ ಗಡ್ಡ ಬಿಟ್ಟರೆ ಜನ ನೋಡುವ ದೃಷ್ಟಿಯೇ ಬೇರೆಯಾಗಿತ್ತು. ಆದರೆ ಇಂದು ಈ ಗಡ್ಡವೆ ಒಂದು ಟ್ರೆಂಡ್ ಆಗಿಬಿಟ್ಟಿದೆ. ವಿವಿಧ ನಮೂನೆಯ ಗಡ್ಡಗಳನ್ನು ಯುವಜನರಲ್ಲಿ ಕಾಣಬಹುದು. ಅದರಲ್ಲೂ ಅನೇಕರು ಉದ್ದನೆಯ ಗಡ್ಡವನ್ನು ಬೆಳೆಸಿಕೊಳ್ಳಲು ಇಷ್ಟಪಡುತ್ತಾರೆ. ತಿಂಗಳು ಕಳೆದರೂ ಕೂಡ ಕೆಲವರು ಸೇವ್ ಮಾಡುವುದಿಲ್ಲ. ಕೆಲವರಂತೂ ಪ್ರತಿದಿನವೂ ಶೇವ್ ಮಾಡಿಕೊಳ್ಳುತ್ತಾರೆ. ಹಾಗಾದರೆ ಪುರುಷರು ತಿಂಗಳಿಗೆ ಎಷ್ಟು ಬಾರಿ ಗಡ್ಡ ಸೇವ್ ಮಾಡಿದರೆ ಒಳಿತು?

 

ತಜ್ಞರ ಪ್ರಕಾರ, ವಾರಕ್ಕೊಮ್ಮೆ ಗಡ್ಡವನ್ನು ಕ್ಷೌರ ಮಾಡುವುದು ಹೆಚ್ಚು ಪ್ರಯೋಜನಕಾರಿ ಏಕೆಂದರೆ ಇದು ಚರ್ಮಕ್ಕೆ ಕಡಿಮೆ ಹಾನಿಯನ್ನುಂಟುಮಾಡುತ್ತದೆ. ಪ್ರತಿದಿನ ಕ್ಷೌರ ಮಾಡಬೇಕೆ ಅಥವಾ ಗಡ್ಡ ಇಟ್ಟುಕೊಳ್ಳಬೇಕೆ ಎಂಬುದು ವ್ಯಕ್ತಿಯ ಆಯ್ಕೆಯ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುತ್ತದೆ.

 

ಅಲ್ಲದೆ ಸೂಕ್ಷ್ಮ ಚರ್ಮ ಹೊಂದಿರುವವರು ಮತ್ತು ಶೇವಿಂಗ್ ನಂತರ ಕಿರಿಕಿರಿ ಅನುಭವಿಸುವವರು ಉತ್ತಮ ಚರ್ಮರೋಗ ತಜ್ಞರನ್ನು ಸಂಪರ್ಕಿಸಬೇಕು. ಚರ್ಮದ ಮೇಲೆ ಯಾವುದೇ ಋಣಾತ್ಮಕ ಪರಿಣಾಮ ಬೀರದಂತೆ ಸರಿಯಾದ ಶೇವಿಂಗ್ ಕ್ರೀಮ್ ಅಥವಾ ಜೆಲ್ ಅನ್ನು ಆಯ್ಕೆ ಮಾಡುವುದು ಸಹ ಬಹಳ ಮುಖ್ಯ.

 

ಇನ್ನು ಪ್ರತಿದಿನ ಗಡ್ಡ ತೆಗೆಯುವುದು ಹಾನಿಕಾರಕವಲ್ಲ, ಆದರೆ ಅದನ್ನು ಎಚ್ಚರಿಕೆಯಿಂದ ಮಾಡಬೇಕು. ಸರಿಯಾದ ರೇಜರ್ ಅಥವಾ ಟ್ರಿಮ್ಮರ್ ಬಳಸಿದರೆ, ಪ್ರತಿದಿನ ಶೇವಿಂಗ್ ಮಾಡಬಹುದು. ಆದರೆ ಒಂದು ಅಥವಾ ಎರಡು ತಿಂಗಳು ಕ್ಷೌರ ಮಾಡಲು ಬಯಸದವರು ತಮ್ಮ ಗಡ್ಡದ ಶುಚಿತ್ವದ ಬಗ್ಗೆ ಗಮನ ಹರಿಸಬೇಕು. ಇದಲ್ಲದೆ, ಮುಖ ಮತ್ತು ಗಡ್ಡವನ್ನು ಚೆನ್ನಾಗಿ ತೊಳೆದು ಪ್ರತಿದಿನ ಮಾಯಿಶ್ಚರೈಸರ್ ಹಚ್ಚುವುದು ಸಹ ಮುಖ್ಯವಾಗಿದೆ.

Comments are closed.