Home News Murder: ಲೈಂಗಿಕ ಕ್ರಿಯೆ ನಂತರ ಪುರುಷರನ್ನು ಜೀವಂತ ಸುಡುತ್ತಿದ್ದ ರಾಣಿ! ಯಾವ ಸಾಮ್ರಾಜ್ಯದ ರಾಣಿ ಇವಳು?

Murder: ಲೈಂಗಿಕ ಕ್ರಿಯೆ ನಂತರ ಪುರುಷರನ್ನು ಜೀವಂತ ಸುಡುತ್ತಿದ್ದ ರಾಣಿ! ಯಾವ ಸಾಮ್ರಾಜ್ಯದ ರಾಣಿ ಇವಳು?

Hindu neighbor gifts plot of land

Hindu neighbour gifts land to Muslim journalist

Murder: ಈ ಇತಿಹಾಸವೇ ವಿಚಿತ್ರ. ಅದರಲ್ಲೂ ಅಂದು ರಾಜ್ಯಗಳನ್ನು ಆಳಿದ ರಾಜ ರಾಣಿಯರ ಜೀವನ ಚರಿತ್ರೆ ಇನ್ನೂ ವಿಶೇಷ. ಆಫ್ರಿಕನ್ ದೇಶ ಅಂಗೋಲಾದ ರಾಣಿ ಝಿಂಗಾ ಮದಂಬಾ, ಒಬ್ಬ ಧೈರ್ಯಶಾಲಿ ಮತ್ತು ತೀಕ್ಷ್ಣ ಮಹಿಳಾ ಹೋರಾಟಗಾರ್ತಿ. 17 ನೇ ಶತಮಾನದಲ್ಲಿ ಝಿಂಗಾ ಮದಂಬಾ ಯುರೋಪಿಯನ್ ದೇಶಗಳ ವಿರುದ್ಧ ಯುದ್ಧ ಘೋಷಿಸಿದ್ದಳು. ಅಂಗೋಲಾದ ರಾಣಿ ಅಧಿಕಾರ ಪಡೆಯಲು ತನ್ನ ಸಹೋದರನನ್ನು ಕೊಂದ ಕಾರಣ ಅವಳನ್ನು ಕ್ರೂರಿ ಮಹಿಳೆ ಎಂದು ಕರೆಯಲಾಗುತ್ತದೆ. ಅಷ್ಟೆ ಅಲ್ಲ ರಾಣಿ ಝಿಂಗಾ ಮದಂಬಾ ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದಿದ ನಂತರ ಅವರನ್ನು ಜೀವಂತವಾಗಿ ಸುಡುತ್ತಿದ್ದಳು ಎಂದು ಐತಿಹಾಸಿಕ ದಾಖಲೆಗಳು ಹೇಳುತ್ತವೆ.

 

ಆಕೆಯ ಅಂತಃಪುರಲ್ಲಿ 50-60 ಪುರುಷರಿರುತ್ತಿದ್ದರು ಮತ್ತು ಅವರೆಲ್ಲರೂ ಮಹಿಳೆಯರಂತೆ ಉಡುಗೆ ತೊಡಲು ಝಿಂಗಾ ಹೇಳುತ್ತಿದ್ದಳು ಎಂದು ವರದಿಗಳು ಹೇಳಿದೆ. ಝಿಂಗಾ ಆಫ್ರಿಕಾದ ಧೈರ್ಯಶಾಲಿ ಮತ್ತು ಚಾಣಾಕ್ಷ ಮಹಿಳೆ ಎಂದು ದಾಖಲೆಗಳಲ್ಲಿ ಉಲ್ಲೇಖವಾಗಿದೆ. ಈಕೆ ಕ್ರೂರಿಯಾಗಿದ್ದರೂ, ರಾಣಿ ಝಿಂಗಾ ಮದಂಬಾ ಅವರನ್ನು ಆಫ್ರಿಕನ್ ಇತಿಹಾಸದಲ್ಲಿ ಜನಪ್ರಿಯ ಮಹಿಳೆ ಎಂದು ಪರಿಗಣಿಸಲಾಗಿದೆ.

 

ಚಿನ್ನ ಮತ್ತು ಬೆಳ್ಳಿಯನ್ನು ಹುಡುಕುತ್ತಾ ಅಂಗೋಲಾದ ಮೇಲೆ ಪೋರ್ಚುಗೀಸ್ ಸೈನ್ಯ ದಾಳಿ ಮಾಡಿತು ಮತ್ತು ರಾಣಿ ಝಿಂಗಾ ಮದಂಬಾ ಅವರ ವಿರುದ್ಧ ಯುದ್ಧ ಘೋಷಿಸಿದರು. ರಾಣಿ ಝಿಂಗಾ ಮದಂಬಾ ಅವರ ತಂದೆ 1617 ರಲ್ಲಿ ನಿಧನರಾದರು, ನಂತರ ಅವರ ಮಗ ನ್ಗೋಲಾ ಮದಂಬಾ ಅಧಿಕಾರವನ್ನು ವಹಿಸಿಕೊಂಡರು. ರಾಣಿ ಝಿಂಗಾ ಮದಂಬಾರಲ್ಲಿ ಇದ್ದ ಗುಣಗಳು ನ್ಗೋಲಾ ಅವರಲ್ಲಿರಲಿಲ್ಲ.