Karkala: ಕಾರ್ಕಳದ ಪ್ರಾಣಿ ಸಂರಕ್ಷಣಾ ಕೇಂದ್ರದಿಂದ 3 ಹಸುಗಳ ಕಳವು!

Karkala: ಕಾರ್ಕಳ (Karkala) ತಾಲೂಕಿನ ಮುಡಾರು ಗ್ರಾಮದ ಬಜಗೋಳಿಯಲ್ಲಿರುವ ಅಹಿಂಸಾ ಅನಿಮಲ್ ಕೇರ್ ಟ್ರಸ್ಟ್ ಹಟ್ಟಿಯಿಂದ 3 ಹಸುಗಳನ್ನು ಕಳ್ಳರು ಕದ್ದುಕೊಂಡು ಹೋದ ಘಟನೆ ನಡೆದಿದೆ. ಈ ಸಂಭವವು 16 ಜೂನ್ ಬೆಳಗ್ಗೆ ಸುಮಾರು 4:00 ರಿಂದ 4:15 ಗಂಟೆಯ ನಡುವೆ ನಡೆದಿದ್ದು, ಕಳವಾದ ದನಗಳ ಮೌಲ್ಯ ಸುಮಾರು 1 ಲಕ್ಷ ರೂಪಾಯಿಗಳಷ್ಟು ಇದೆ ಎಂದು ಟ್ರಸ್ಟ್ ಅಧಿಕಾರಿಗಳು ತಿಳಿಸಿದ್ದಾರೆ.

ಅಹಿಂಸಾ ಅನಿಮಲ್ ಕೇರ್ ಟ್ರಸ್ಟ್ ಸಂಚಾಲಕ ಎಂ.ಕೆ. ವಿರಂಜಯ್ ಅವರ ದೂರಿನ ಪ್ರಕಾರ, ಕಳ್ಳರು ವಾಹನದಲ್ಲಿ ಬಂದು ಹಟ್ಟಿಯಲ್ಲಿದ್ದ 3 ಹಸುಗಳನ್ನು ಬಲವಂತವಾಗಿ ಒಯ್ದಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Comments are closed.